ತುಮಕೂರು: ಕುಟುಂಬವೊಂದು ತಮ್ಮ ಮುದ್ದಿನ ಗಿಣಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರ ಅಂಟಿಸುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ ಕೊನೆಗೂ ಗಿಣಿ ಮಾಲಿಕರ ಮಡಿಲು ಸೇರಿದ್ದು, ಹುಡುಕಿಕೊಟ್ಟವರ ಕೈಗೆ ಭರ್ಜರಿ ಬಹುಮಾನ ಸಿಕ್ಕಿದೆ.
ರುಸ್ತುಮ್ ಎಂಬ ಹೆಸರಿನ ಗಿಣಿ ನಾಪತ್ತೆಯಾದ ಗಿಣಿಯಾಗಿದ್ದು, ಈ ಗಿಣಿಯು ತುಮಕೂರಿನ ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಪತ್ತೆಯಾಗಿತ್ತು. ಗಿಣಿಯನ್ನು ನೋಡಿದ ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಎಂಬವರು ತಮ್ಮ ಮನೆಗೆ ಕೊಂಡು ಹೋಗಿ ಸಾಕುತ್ತಿದ್ದರು.
ಇತ್ತ ಗಿಣಿ ನಾಪತ್ತೆಯಾದ ಬಗ್ಗೆ ಪೋಸ್ಟರ್ ಕಂಡು ಗಿಣಿಯ ಮಾಲಿಕ ಅರ್ಜುನ್ ಅವರಿಗೆ ಕರೆ ಮಾಡಿದ್ದು, ಅವರು ತಕ್ಷಣ ಬಂದು ಈ ಗಿಣಿ ನಮ್ಮದು ಎಂದು ಖಾತರಿ ಪಡಿಸಿಕೊಂಡಿದ್ದಾರೆ.ಇನ್ನೂ ಗಿಣಿಯನ್ನು ಹುಡುಕಿಕೊಟ್ಟವರಿಗೆ ತಮ್ಮ ಮಾತಿನಂತಯೇ ಅರ್ಜುನ್ 85 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy