ಕಾರು ಅಪಘಾತಗೊಂಡು ತೀವ್ರ ಸ್ವರೂಪದ ಗಾಯಗಳಾಗಿದ್ದರೂ ಹುಡುಗಿಯರು ರಸ್ತೆಯಿಂದ ಏಳದೆ ಅಲ್ಲೇ ಕೂತು ಸೆಲ್ಫಿಗೆ ಪೋಸ್ ಕೊಟ್ಟಿರುವ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ವರದಿಯಾಗಿದೆ. ಮೆಕ್ಸಿಕನ್ ನಗರದ ಕ್ಯುರ್ನಾವಾಕಾದ ರಸ್ತೆಯಲ್ಲಿ ಐವರು ಯುವತಿಯರು ಕಾರಿನಲ್ಲಿ ಹೋಗುತ್ತಿರಬೇಕಾದರೆ ಲೋಮಾಸ್ ಡೆಲ್ ಮಿರಾಡೋರ್ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು.
ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಇಬ್ಬರು ಯುವತಿಯರು ಕಾರಿನಿಂದ ಹೊರಬಿದ್ದು ತೀವ್ರತರದ ಗಾಯಗಳಾಗಿದೆ. ಮಾರ್ಗದಲ್ಲೇ ಇಬ್ಬರು ಯುವತಿಯರು ಬಿದ್ದಿದ್ದು, ಇತರೆ ಮೂವರು ಕಾರಿನಲ್ಲಿ ಸಿಲುಕಿಕೊಂಡಿದ್ದರು. ಆದರೆ ರಸ್ತೆಯಲ್ಲಿ ಬಿದ್ದಿದ್ದ ಇಬ್ಬರು ಯುವತಿಯರು ಗಾಯಗೊಂಡಿದ್ದರೂ ಅಪಘಾತವಾದ ಕಾರಿನ ಮುಂದೆ ಕುಳಿತು ಸೆಲ್ಫಿಗಾಗಿ ಪೋಸ್ ಕೊಟ್ಟಿರುವುದು ಟೀಕೆಗೆ ಗುರಿಯಾಗಿದೆ.
ಆಂಬ್ಯುಲೆನ್ಸ್ ಬರುವವರೆಗೆ ಇಬ್ಬರು ಸೆಲ್ಫಿಗೆ ಪೋಸ್ ನೀಡುತ್ತಲೇ ಅಲ್ಲೇ ಕುಳಿತಿದ್ದಾರೆ. ಇದಕ್ಕೆ ಕಾರಣ ಕಾರಿನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದರು ಎಂದು ಶಂಕಿಸಲಾಗಿದೆ. ಸದ್ಯ ಮೆಕ್ಸಿಕನ್ ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296