ಗೂಗಲ್ ಕ್ರೋಮ್‌ವೆಬ್ ಬ್ರೌಸರ್‌ನಲ್ಲಿ ಭದ್ರತಾ ಲೋಪ ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಸಂಸ್ಥೆಯ ಸೈಬರ್ ಭದ್ರತೆ ಮತ್ತು ಸೆಕ್ಯುರಿಟಿ ವಿಭಾಗದ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಗೂಗಲ್ ಕ್ರೋಮ್ ಬಳಕೆದಾರರಿಗಾಗಿ ನೂತನ ಅಪ್‌ಡೇಟ್ ಒಂದನ್ನು ಬಿಡುಗಡೆ ಮಾಡಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು, ಅಪ್‌ಡೇಟ್ ಮಾಡಿಕೊಳ್ಳಿ ಎಂದು ಕಂಪೆನಿ ತಿಳಿಸಿದೆ. ಲಿನಕ್ಸ್ ಮತ್ತು ವಿಂಡೋಸ್ ಬಳಕೆದಾರರಿಗೆ 107.0.5304.121/.122 ಹೊಸ ಅಪ್‌ಡೇಟ್ ಲಭ್ಯವಿದ್ದು, ಬಳಕೆದಾರರು ಮೆನುವಿಗೆ ಹೋಗಿ ಅಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮೂಲಕ ಎಬೌಟ್ ಕ್ರೋಮ್ ಎಂದಿರುವುದನ್ನು ಕ್ಲಿಕ್ ಮಾಡಬೇಕು.
ಬಳಿಕ ಗೂಗಲ್ ಕ್ರೋಮ್ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ. ಹೊಸ ಅಪ್‌ಡೇಟ್ ಬಳಕೆ ಮಾಡುವುದರಿಂದ ಹ್ಯಾಕಿಂಗ್ ಸಾಧ್ಯತೆಯನ್ನು ತಪ್ಪಿಸಬಹುದು. ಕ್ರೋಮ್ ಮೂಲಕ ವೈರಸ್, ಮಾಲ್ವೇರ್ ನಿಮ್ಮ ಕಂಪ್ಯೂಟರ್ ಪ್ರವೇಶಿಸುವುದನ್ನು ತಡೆಯಬಹುದು ಎಂದು ಸೈಬರ್ ಭದ್ರತೆ ಮತ್ತು ಸೆಕ್ಯುರಿಟಿ ವಿಭಾಗದ ತಜ್ಞರು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy