ಬೀದರ್: ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕಮಲನಗರ ಪೊಲೀಸರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಕಮಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಶಿವಾನಂದ ಪವಾಡಶೆಟ್ಟಿ ಡಿವೈಎಸ್ ಪಿ ಭಾಲ್ಕಿ, ಅಮರಪ್ಪ ಶಿವಬಲ್ ಸಿಪಿಐ ಕಮಲನಗರ ವೃತ್ತ, ಇವರ ನೇತೃತ್ವದಲ್ಲಿ ಚಂದ್ರಶೇಖರ ಪಿ.ಎಸ್.ಐ, ಬಾಲಾಜಿ ಪಿ.ಎಸ್.ಐ ಕಮಲನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರಾದ ಇಮ್ರಾನ, ಪ್ರಶಾಂತ, ರಾಜಪ್ಪಾ, ಉಮಾಕಾಂತ ಇವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡವು ವೈಜ್ಞಾನಿಕ ನೆರವು, ಸಿ.ಸಿಟಿ.ವಿ., ಪೊಲೀಸ್ ಬಾತ್ಮೀದಾರರ ಮಾಹಿತಿಯಂತೆ ಕುಶನೂರ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಆರೋಪಿಗಳಿಂದ 1,81,200 ರೂಪಾಯಿ ಬೆಲೆ ಬಾಳುವ 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸಿಸಿ ಕ್ಯಾಮರಾ ಅಳವಡಿಸಲು ಮನವಿ:
ಜಿಲ್ಲೆಯಲ್ಲಿ ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗ್ರಾಮಗಳ ಪ್ರಮುಖ ರಸ್ತೆಗಳ ಮೇಲೆ, ಮನೆಗಳಿಗೆ/ಅಂಗಡಿಗಳಿಗೆ ಸಿ.ಸಿ ಟಿವಿ ಅಳವಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಿ.ಸಿಟಿವಿ ಅಳವಡಿಸಿದಲ್ಲಿ ಅಪರಾಧಗಳನ್ನು ಸರಳವಾಗಿ ಪತ್ತೆ ಮಾಡಬಹುದಾಗಿದ್ದು, ಮುಂದೆ ಸಂಭವಿಸುವ ಅಪರಾಧ ತಡೆಯ ಬಹುದಾಗಿದೆ. ಆದುದ್ದರಿಂದ ನಾಗರಿಕರು ತಮ್ಮ ಮನೆ, ಅಂಗಡಿ, ಗ್ರಾಮಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲು ಪೊಲೀಸರು ಕೋರಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q