ಕೊರಟಗೆರೆ: 25 ಎಕರೆ ಜಮೀನಿಗಾಗಿ ಗೊಲ್ಲ–ದಲಿತ ಸಮುದಾಯದ ಜನರ ನಡುವೆ ಸಂಘರ್ಷ ಉಂಟಾದ ಘಟನೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಸಂಕೇನಹಳ್ಳಿಯ ಗ್ರಾಮದ ಸರಕಾರಿ ಗೋಮಾಳದಲ್ಲಿ ನಡೆದಿದೆ.
ಸಂಕೇನಹಳ್ಳಿ ಗ್ರಾಮದ ಸರ್ವೆ ನಂ.15 ಮತ್ತು 16ರಲ್ಲಿನ 25 ಎಕರೇ ಗೋಮಾಳ ಜಮೀನಿದೆ. 25 ಎಕರೆ ಗೋಮಾಳದ ಜಮೀನಿಗೆ ಸಂಕೇನಹಳ್ಳಿಯ 20 ಜನ ದಲಿತ ಕುಟುಂಬ ಅರ್ಜಿ ಸಲ್ಲಿಸಿದೆ. ಕಳೆದ 70 ವರ್ಷದಿಂದ ಸಂಕೇನಹಳ್ಳಿಯ 75 ದಲಿತ ಕುಟುಂಬಗಳಿಗೆ ಸ್ಮಶಾನವೇ ಇಲ್ಲದೇ ಪರದಾಡುತ್ತಿದ್ದಾರೆ.
ಅತ್ತ ಗೋಮಾಳದ ಜಮೀನು ಮೇವಿಗಾಗಿ ಉಳಿಸಿಕೊಳ್ಳಲು ಗೊಲ್ಲ ಸಮುದಾಯದ ಅಲೆದಾಡುತ್ತಿದೆ. ಉಳುಮೆ ಮಾಡಲು ಗೋಮಾಳದ ಜಮೀನು ಪಡೆಯಲು ದಲಿತ ಕುಟುಂಬಗಳ ಪರದಾಡುತ್ತಿದೆ. ಒಟ್ಟಿನಲ್ಲಿ 40 ವರ್ಷದ ಗೊಲ್ಲ ಮತ್ತು ದಲಿತರ ನಡುವಿನ ಸಂಘರ್ಷಕ್ಕೆ ಪರಿಹಾರವೇ ಇಲ್ಲದಂತಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q