ಹುಣಸೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಗೊಮ್ಮಟಗಿರಿಯ ಬಾಹುಬಲಿ ಬೆಟ್ಟದ ಕೆಳಗೆ ಬಾಹುಬಲಿಗೆ ಅಭಿಮುಖವಾಗಿ ನೂತನ ಬ್ರಹ್ಮಸ್ಥಂಭ ಹಾಗೂ ಅದರ ಮೇಲೆ ಬ್ರಹ್ಮ ಯಕ್ಷರ ಪ್ರತಿಷ್ಠಾಪನೆ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು, ಆರಾಧನೆಗಳು ನಡೆದವು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟರಕ ಶ್ರೀಗಳು, ಶ್ರೀಕ್ಷೇತ್ರ ಆರತಿಪುರ ದಿಗಂಬರ ಜೈನಮಠದ ಸ್ವಸ್ತಿ ಶ್ರೀ ಸಿದ್ಧಾಂತಕೀರ್ತಿ ಭಟ್ಟರಕ ಶ್ರೀಗಳು ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಲತಾಸುದರ್ಶನ್, ಪ್ರಸನ್ನ ಕುಮಾರ್, ಗುಮ್ಮಟಗಿರಿ ಸೇವಾ ಸಮಿತಿಯ ಅಧ್ಯಕ್ಷ ಮನ್ಮಥರಾಜು ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರತಿ ಪ್ರತಿಷ್ಠಾಪನಾಚಾರ್ಯ ಬಜಗೋಳಿಯ ವರ್ಧಮಾನ ಇಂದ್ರರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮ ಯಕ್ಷರ ಹಾಗೂ ಬ್ರಹ್ಮಸ್ತಂಬದ ದಾನಿಗಳಾದ ಹಾಸನ ಜಿಲ್ಲೆ ಅಡಗೂರಿನ ಪದ್ಮಾವತ್ತಮ್ಮ ಎ.ಬಿ.ನಾಗೇಂದ್ರಯ್ಯಾ ಮತ್ತು ಮಕ್ಕಳು, ಮೈಸೂರಿನ ಎ.ಎನ್. ಧರಣೇಂದ್ರ ಸಹೋದರರು ಮತ್ತು ಕುಟುಂಬಸ್ಥರು ಗುಮ್ಮಟಗಿರಿ ಸೇವಾ ಸಮಿತಿಯ ಪದಾಧಿಕಾರಿಗಳು, ನೂತನ ಅಮೃತಕುಟಿರಾ ಕಟ್ಟಡದ ದಾನಿಗಳು ಸ್ಥಳೀಯ ಜೈನ ಬಂಧುಗಳು ಅಕ್ಕಪಕ್ಕದ ಗ್ರಾಮಸ್ಥರು ಶ್ರಾವಕ, ಶ್ರಾವಕಿಯರು ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q