ತುಳು ಭಾಷೆಗೆ ಜಾಗತಿಕವಾಗಿ ಸ್ಥಾನ ಮಾನ ದೊರಕಲು ಪ್ರಯತ್ನಗಳು ನಡೆಯುತ್ತಿದ್ದು ಅದರ ಭಾಗವಾಗಿ ಗೂಗಲ್ ಟ್ರಾನ್ಸೇಲಟರ್ ನಲ್ಲಿ ಇತರ ಭಾಷೆಗಳಿಂದ ತುಳು ಭಾಷೆಯ ಅರ್ಥಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಸೇರ್ಪಡೆಗೊಂಡಿರುವುರಿಂದ ತುಳುನಾಡಿಗೆ ಬರುವ ಪ್ರವಾಸಿಗರಿಗೆ ತುಳುವರೊಂದಿಗೆ ಮಾತನಾಡಲು ಅನುಕೂಲವಾಗಲಿದೆ. ಗೂಗಲ್ ಟ್ರಾನ್ಸ್ಲೇಟರ್ ಪಟ್ಟಿಯಲ್ಲಿ ತುಳು ಭಾಷೆಗೂ ಮಾನ್ಯತೆ ಲಭಿಸಿದ್ದು, ಇದು ತುಳು ಭಾಷಾ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ. ಇನ್ಮುಂದೆ ತುಳು ಭಾಷಿಗರು ಇಂಗ್ಲಿಷ್ ಅಥವಾ ಬೇರೆ ಯಾವುದೇ ಪದಗಳನ್ನು ಗೂಗಲ್ ಅನುವಾದದಲ್ಲಿ ನೇರವಾಗಿ ತುಳಿವಿನಲ್ಲಿಯೇ ಅರ್ಥ ಮಾಡಿಕೊಳ್ಳಬಹುದು. ಇದಲ್ಲದೆ, ಇದು ಅನ್ಯ ಭಾಷಿಕರಿಗೂ ತುಳು ಪದಗಳನ್ನು (ಭಾಷೆ) ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲವಾಗಿದೆ.
ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ.
ಗೂಗಲ್ ಟ್ರಾನ್ಸ್ ಲೇಟ್ ಅಥವಾ ಗೂಗಲ್ ಭಾಷಾಂತರ ಇದು ಗೂಗಲ್ನ ಉಚಿತ ಭಾಷಾ ಅನುವಾದ ಸಾಧನವಾಗಿದೆ. ಇದು ಬಳಕೆದಾರರಿಗೆ ಪದಗಳು, ನುಡಿಗಟ್ಟುಗಳು, ಪಠ್ಯಗಳು ಮತ್ತು ಸಂಪೂರ್ಣ ವೆಬ್ ಪುಟಗಳನ್ನು ವಿವಿಧ ಭಾಷೆಗಳ ನಡುವೆ ಭಾಷಾಂತರಿಸಲು ಅನುವು ಮಾಡಿಕೊಡುತ್ತದೆ.
ಒಟ್ನಲ್ಲಿ, ಕ್ಷಣಾರ್ಧದಲ್ಲಿ ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಬಲ್ಲ ಗೂಗಲ್ ಟ್ರಾನ್ಸ್ಲೇಟರ್ಗೆ ಇದೀಗ ತುಳು ಭಾಷೆ ಕೂಡ ಸೇಪರ್ಡೆಯಾಗಿದೆ. ಈಗ ಗೂಗಲ್ ಅನುವಾದದಲ್ಲಿ ಕನ್ನಡ, ಇಂಗ್ಲೀಷ್ ಸೇರಿದಂತೆ ಯಾವುದೇ ಭಾಷೆಯ ಪದಗಳನ್ನು ತುಳುವಿಗೆ ಭಾಷಾಂತರಿಸಿಕೊಳ್ಳಬಹುದಾದ ಆಯ್ಕೆ ದೊರಕಿದೆ. ಈ ಒಂದು ಖುಷಿಯ ವಿಚಾರ ತುಳುವರಿಗೆ ಸಂತಸ ತಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA