ಕಾವೇರಿ ಕೊಳ್ಳದ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆ ಆರ್ ಎಸ್ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಇನ್ನು ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ಜಲಾಶಯದಲ್ಲಿ ನೀರಿನ ಮಟ್ಟ 108. 18 ಅಡಿಗಳಿದೆ ಏರಿಕೆಯಾಗಿದೆ.
ಇತ್ತ ಜಲಾಶಯದ ಸಂಪೂರ್ಣ ಚಿತ್ರಣ ನೋಡುವುದಾದ್ರೆ, ಗರಿಷ್ಠ ಮಟ್ಟ – 124.80 ಅಡಿಗಳು. ಇಂದಿನ ಮಟ್ಟ – 108. 18. ಗರಿಷ್ಠ ಸಾಂದ್ರತೆ – 49.452 ಟಿಎಂಸಿ. ಇಂದಿನ ಸಾಂದ್ರತೆ – 29.931 ಟಿಎಂಸಿ. ಒಳ ಹರಿವು – 40, 341 ಕ್ಯೂಸೆಕ್, ಹೊರ ಹರಿವು – 4, 106 ಕ್ಯೂಸೆಕ್ ಎಂದು ಮಾಹಿತಿ ಬಿಡುಗಡೆಯಾಗಿದೆ.
ಇನ್ನು ಇದೇ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಬಂದರೆ, ಮುಂದಿನ 15 ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಇದರ ಜೊತೆಗೆ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಅಭಾವವು ದೂರಾಗಲಿದೆ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


