ವರದಿ: ಹಾದನೂರು ಚಂದ್ರ
ಸರಗೂರು: ಗೂಡ್ಸ್ ಆಟೋ ಪಲ್ಟಿಯಾಗಿ 15 ಮಂದಿಗೆ ಗಾಯಗೊಂಡು ಅದರಲ್ಲಿ 3 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಪಟ್ಟಣದ ಹುಣಸೂರು ಬೇಗೂರು ರಸ್ತೆಯ ಕಬಿನಿ ಬಲದಂಡೆ ನಾಲೆಯ ಬಳಿ ನಡೆದಿದೆ.
ಕೋತ್ತೆಗಾಲ ಗ್ರಾಪಂ ವ್ಯಾಪ್ತಿಯ ಗೊತ್ತಗಾಲಹುಂಡಿ ಗ್ರಾಮದ ಜನರು ಬೇರೆ ಊರಿಗೆ ಶುಂಠಿ ಕೆಲಸ ಮಾಡಲು ಹೋಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಒಂದೇ ಗ್ರಾಮದ ನಿವಾಸಿಗಳಾದ ಇವರು ಪ್ರತಿದಿನವೂ ಕೂಲಿ ಕೆಲಸ ಹೋಗುತ್ತಿದ್ದಾರೆ, ಆದರೆ ಬುಧವಾರ ಬೆಳಗ್ಗೆ ಗ್ರಾಮದಿಂದ ಸರಗೂರು ಪಟ್ಟಣ ಮಾರ್ಗವಾಗಿ ಬೇರೆ ಊರಿಗಳಿಗೆ ತೆರಳುತ್ತಿದ್ದ ವೇಳೆ ಕಬಿನಿ ಬಲದಂಡೆ ನಾಲೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಪಲ್ಟಿಯಾಗಿದೆ. ತಕ್ಷಣ ಸ್ಥಳೀಯರು ಆಟೋದ ಕೆಳಗೆ ಸಿಲುಕಿಕೊಂಡಿದ್ದ ವ್ಯಕ್ತಿಗಳನ್ನು ಹೊರ ತೆಗೆದು ರಕ್ಷಿಸಿದ್ದಾರೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ 7:30 ಸಮಯದಲ್ಲಿ ಅಪಘಾತ ಸಂಭವಿಸಿತ್ತು. ಆದರೆ 9 ಗಂಟೆಯಾದರೂ ಸ್ಥಳಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ, ಕೊನೆಗೂ ಆ ಸಮಯದಲ್ಲಿ ಆರೋಗ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕರೆ ಮಾಡಿ ತಿಳಿಸಿದರೂ ಅಪಘಾತವಾದ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿದೆ ನಿರ್ಲಕ್ಷ ವಹಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದು ಶೀಘ್ರದಲ್ಲೇ ಸರಗೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಸಾರ್ವಜನಿಕರು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅಪಘಾತದಲ್ಲಿ 15 ಮಂದಿ ಗಾಯಾಳುಗಳಾಗಿರುತ್ತಾರೆ, ಇದರಲ್ಲಿ 3 ಮಹಿಳೆಯರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ರವಾನಿಸಲಾಗಿರುತ್ತದೆ ಮತ್ತು 12 ಜನರಿಗೆ ವಿ ಎಮ್ ಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪೈಕಿ ಒಬ್ಬ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಒಬ್ಬ ಪುರುಷ ಗಾಯಾಳುಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸ್ಥಳದಲ್ಲೇ ನಿಂತು ಸೂಕ್ತ ವ್ಯವಸ್ಥೆ ಮಾಡಲಾಗಿರುತ್ತದೆ.
— ಡಾ. ಶರತ್, ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿಗಳು, ಹೆಚ್.ಡಿ.ಕೋಟೆ ಮತ್ತು ಸರಗೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC