ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಡಿವೈಸ್ನ ಪರಿಸರ ವ್ಯವಸ್ಥೆಯ ಮಾರುಕಟ್ಟೆಗಳಲ್ಲಿ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಟೆಕ್ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ಸ್ಪರ್ಧಾ ಆಯೋಗವು 1,337.76 ಕೋಟಿ ರೂಪಾಯಿಗಳ ದಂಡ ವಿಧಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸ್ಪರ್ಧಾ ಆಯೋಗ , ಗೂಗಲ್ ಪ್ಲೇ ಸ್ಟೋರ್ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ ಮತ್ತು ಆಂಟಿ ಫ್ರಾಗ್ಮೆಂಟೇಶನ್ ಅಗ್ರಿಮೆಂಟ್ ಉಲ್ಲಂಘನೆಗಾಗಿ ದಂಡ ಹಾಕಲಾಗಿದೆ. ಜೊತೆಗೆ, ಗೂಗಲ್ ತನ್ನ ನಡವಳಿಕೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಿಸಿಕೊಳ್ಳುವಂತೆಯೂ ಸೂಚಿಸಿದೆ.
ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ ಅಡಿಯಲ್ಲಿ ಗೂಗಲ್ ಮೊಬೈಲ್ ಸೂಟ್ ಅನ್ನು ಕಡ್ಡಾಯವಾಗಿ ಮೊದಲೇ ಇನ್ಸ್ಟಾಲ್ ಮಾಡಬೇಕು. ಅದನ್ನು ಅನ್-ಇನ್ಸ್ಟಾಲ್ ಮಾಡಲು ಯಾವುದೇ ಆಯ್ಕೆಯಿಲ್ಲ. ಆದರೆ, ಸ್ಪರ್ಧಾ ಕಾನೂನನ್ನು ಗೂಗಲ್ ಉಲ್ಲಂಘಿಸುತ್ತಿದೆ ಎಂದು ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz