ಈಗ ಎಲ್ಲಿ ನೋಡಿದ್ರೂ ಯುಪಿಐ ಪೇಮೆಂಟ್ ಹೆಚ್ಚು. ಎಲ್ಲರ ಮೊಬೈಲ್ ನಲ್ಲಿ ಈ ಗೂಗಲ್ ಪೇ (Google Pay) ಇದ್ದೇ ಇರುತ್ತೆ. ಆದರೆ, ನಾಳೆಯಿಂದ ಇಲ್ಲಿ ಈ ಗೂಗಲ್ ಪೇ ಕೆಲಸ ಮಾಡಲ್ಲ! ಹೌದಾ ?
ಹೌದು, USನಲ್ಲಿ Google Pay ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತದೆ. ಟೆಕ್ ದೈತ್ಯ ತನ್ನ ಬ್ಲಾಗ್ ನಲ್ಲಿ ಜೂನ್ 4 ರವರೆಗೆ ಅಮೆರಿಕನ್ನರು ಹಣ ವರ್ಗಾವಣೆ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಜೂನ್ 4ರ ನಂತರ Google ತನ್ನ Google Pay ಅಪ್ಲಿಕೇಶನ್‌ನ US ಆವೃತ್ತಿಯನ್ನು ಮುಚ್ಚುತ್ತದೆ.
ನಾಳೆಯಿಂದ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದೆ. ಇದರ ಬದಲಾಗಿ Google Wallet ಆಯಪ್ ಸೇವೆ ಆರಂಭಗೊಂಡಿದೆ. Google Pay ಬಳಕೆದಾರರು ಗೂಗಲ್ ವಾಲೆಟ್ ಬಳಸುವಂತೆ ಸೂಚಿಸಲಾಗಿದೆ.
ಗೂಗಲ್ ಪೇ ಆಯಪ್ ಕಾರ್ಯಾಚರಣೆಯಲ್ಲಿ ಇನ್ನಷ್ಟು ಸರಳ ಫೀಚರ್ ಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ Google Pay ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಗೂಗಲ್ ಪೇ ಆಯಪ್ ಸ್ಥಗಿತವಾದರೂ, ಈಗ ಗ್ರಾಹಕರು ಗೂಗಲ್ ವ್ಯಾಲೆಟ್ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದೆ.
Google Pay ಸೇವೆ ಸ್ಥಗಿತಗೊಳ್ಳುತ್ತಿದೆ ಎಂಬ ಸುದ್ದಿಯು ಭಾರತದ ಗ್ರಾಹಕರಲ್ಲಿ ಚಿಂತೆ ಉಂಟುಮಾಡಿದೆ. ಆದರೆ ಭಾರತದಲ್ಲಿ ಗೂಗಲ್ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಭಾರತ ಮತ್ತು ಸಿಂಗಾಪುರ ದೇಶದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುವುದಿಲ್ಲ. ಈ ದೇಶಗಳಲ್ಲಿ Google Pay ಸ್ಟಾಂಡ್‌ಲೋನ್ ಆಯಪ್ ಆಗಿ ಮುಂದುವರಿಯಲಿದೆ. ಗ್ರಾಹಕರು ಎಂದಿನಂತೇ Google Pay ಸೇವೆಯನ್ನು ಬಳಸಿಕೊಳ್ಳಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA