ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ 2,500 ಮೋಸದ ಸಾಲದ ಆ್ಯಪ್ ಗಳನ್ನು ತೆಗೆದು ಹಾಕಿದೆ. ಈ ಕ್ರಮಗಳನ್ನು ಏಪ್ರಿಲ್ 2021 ಮತ್ತು ಜುಲೈ 2022 ರ ನಡುವೆ ತೆಗೆದು ಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೇಂದ್ರವು ಕಾಲಕಾಲಕ್ಕೆ ರಿಸರ್ವ್ ಬ್ಯಾಂಕ್ ಮತ್ತು ಇತರ ನಿಯಂತ್ರಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಅವರು ಹೇಳಿದರು. ಕಾನೂನಿಗೆ ವಿರುದ್ಧವಾಗಿರುವ ಸಾಲದ ಆ್ಯಪ್ ಗಳ ವಿವರಗಳನ್ನು ರಿಸರ್ವ್ ಬ್ಯಾಂಕ್ ನೀಡಿದೆ ಎಂದು ಅವರು ಹೇಳಿದರು.


