ತಿಪಟೂರು: ಇಲ್ಲಿನ ಕುಪ್ಪೂರು ತಮ್ಮಡಿಹಳ್ಳಿಯ ವಿರಕ್ತ ಮಠದ ಶಾಖಾಮಠ ಭಕ್ತರ ಅಪೇಕ್ಷೆಯ ಮೇರೆಗೆ ಮಾರ್ಚ್ 27ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಯ ಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ತಿಪಟೂರಿನಲ್ಲಿ ಸುದ್ದಿಗೋಷ್ಠಿಯ ಲಿ ಮಾತನಾಡಿದ ಶ್ರೀಗಳು, ಶಾಖಾ ಮಠವನ್ನು ಕೆರೆಗೋಡಿ ರಂಗಾಪುರ ಗುರುಪರದೇಶಿಕೇಂದ್ರ ಸ್ವಾಮೀಜಿ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿದೆ. ಅಭಿನವ ಸದನ ಕಟ್ಟಡದ ಉದ್ಘಾಟನೆಯು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಚಿವರುಗಳಾದ ಜೆ.ಸಿ. ಮಧುಸ್ವಾಮಿ ಬಿ.ಸಿ. ನಾಗೇಶ್ ಸಂಸದ ಜಿ.ಎಸ್. ಬಸವರಾಜು ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದರು.
ತಿಪಟೂರಿನಲ್ಲಿ ಹತ್ತು ವರ್ಷದ ಹಿಂದೆ ಸಹಕಾರಿ ಬ್ಯಾಂಕ್ ಪ್ರಾರಂಭಿಸಿದ್ದು, ಭಕ್ತರ ಒತ್ತಾಸೆಯ ಮೇರೆಗೆ ಶಾಖಾ ಮಠವನ್ನು ಪ್ರಾರಂಭಿಸಬೇಕೆಂದು ಪ್ರೇರಣೆ ಯಾಗಿದ್ದರಿಂದ ಶಾಖಾ ಮಠವನ್ನು ಪ್ರಾರಂಭಿಸುತ್ತಿದ್ದು, ಪ್ರತಿ ತಿಂಗಳು ಹುಣ್ಣಿಮೆಯ ದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು ಅಂದು ಮತ್ತು ಪ್ರತಿ ಭಾನುವಾರ ಸದನದಲ್ಲಿ ಉಪಸ್ಥಿತರಿದ್ದರು ಆಶೀರ್ವಾದ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಸದಾಶಿವಯ್ಯ ಹಾಗೂ ಮುಖಂಡರು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5