ತುಮಕೂರು: ಜನತಾ ದರ್ಶನ ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವಾಗಿದ್ದು ಜನರ ಆಶೋತ್ತರಗಳಿಗೆ ಸರಿಯಾಗಿ ಆಡಳಿತ ಎಂದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಜನತಾದಶಃ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ನಾವು ಜನ ಪರವಾದ ಆಡಳಿತ ಕೊಡ್ತೆವೆ ಅಂತ ಹೇಳಿಕೊಂಡು ಬಂದಿದ್ದೇವೆ. ಅದೇ ರೀತಿ ನಮ್ಮ ಆಡಳಿತ ಚುರುಕಾಗಬೇಕು ಎಂದರು.
ಹೆಚ್ಚಿನ ರೀತಿಯಲ್ಲಿ ಜನರಿಗೆ ಸ್ಪಂದನೆ ಮಾಡಬೇಕು ಎಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಕೂಡಾ ನಮ್ಮ ಸರ್ಕಾರ ಮಾಡಿದೆ. ಅದನ್ನ ಮತ್ತೆ ಪ್ರಾರಂಭ ಮಾಡಿದ್ದೆವೆ ಎಂದರು.
ಜನರ ಅರ್ಜಿಗಳನ್ನ ತಗೊಂಡು ಸಮಸ್ಯೆಗಳು ಏನಿದೆ ಅದನ್ನ ಪರಿಹರಿಸಿ ಉತ್ತರ ಕೊಡ್ತಾರೆ. ಮೊದಲನೇಯದಾಗಿ ಇವತ್ತು ನಾವು ಪ್ರಾರಂಭ ಮಾಡ್ತಿದ್ದೇವೆ ಎಂದರು.
ಇಡೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರಾರಂಭ ಮಾಡ್ತಾರೆ. ಬೆಂಗಳೂರಿನಲ್ಲಿ 30ನೇ ತಾರೀಖು ಮುಖ್ಯಮಂತ್ರಿಗಳು ಜನತಾ ದರ್ಶನವನ್ನ ಇಟ್ಟುಕೊಂಡಿದ್ದಾರೆ ಎಂದರು.
ಲೋಕಾಸಭಾ ಚುನಾವಣೆಗೆ ಜಿಲ್ಲೆಗೆ ಉಸ್ತುವಾರಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಿಂದ ಪ್ರತಿಯೊಬ್ಬ ಸಚಿವರನ್ನ ಲೋಕಾಸಭಾ ಚುನಾವಣೆಗೆ ಉಸ್ತುವಾರಿ ವಹಿಸಿದ್ದಾರೆ. ನನಗೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾಕಿದ್ದಾರೆ. ತುಮಕೂರು ಇರುತ್ತೆ ಅದರ ಜೊತೆಗೆ ಮತ್ತೊಂದು ಕ್ಷೇತ್ರ ಹಾಕಿದ್ದಾರೆ ಎಂದರು.
ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನನ್ನ ಗೌರಿಶಂಕರ್ ಭೇಟಿ ಮಾಡಿದ್ರು. ನನ್ನ ಆರೋಗ್ಯ ವಿಚಾರಿಸಿ ಚೆನ್ನಾಗಿದ್ದೀರಾ ಅಣ್ಣ ಅಂತ ಮಾತಾಡ್ಸಿ ಹೋದ್ರು. ನನ್ನ ಬಳಿ ರಾಜಕೀಯ ಚರ್ಚೆ ಮಾಡಿಲ್ಲ.ಹಾರ, ಹಣ್ಣು ಕೊಟ್ರು ಒಳ್ಳೆಯದಾಗಲಿ ಅಂತ ಹೇಳಿದ್ರು. ರಾಜಕೀಯ ಚರ್ಚೆ ಮಾಡಿಲ್ಲ ಎಂದರು.
ನಾಳೆ ಬೆಂಗಳೂರು ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಪೊಲೀಸ್ ಇಲಾಖೆ ವತಿಯಿಂದ ಕಾನೂನು ರಕ್ಷಣೆ ಮಾಡೋದಿಕ್ಕೆ ಏನ್ ಮಾಡಬೇಕು ಅದನ್ನೆಲ್ಲಾ ನಮ್ಮ ಇಲಾಖೆ ಮಾಡಿಕೊಂಡಿದ್ದಾರೆ ನಾನು ಅವರಿಗೆ ಮನವಿ ಮಾಡೋದು ಇಷ್ಟೇ ಎಂದು ತಿಳಿಸಿದರು.
ಒಂದು ಬಂದ್ ಮಾಡಬೇಡಿ ಅಂತ ಹೇಳ್ತಿವಿ. ಆದರೆ ಅವರು ಮಾಡೇ ಮಾಡ್ತಾರೆ ಆದರು ಯಾವುದೇ ತರಹದ ಅಹಿತಕರ ಘಟನೆಗಳು ನಡೆಯಬಾರದು,ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು ಎಂದರು.
ಸರ್ಕಾರಿ ಆಸ್ತಿಗಳ ನಷ್ಟ ಆಗಬಾರದು ಕಾನೂನು ಬಾಹಿರವಾದಂತಹ ಯಾವುದೇ ಚಟುವಟಿಕೆಗಳನ್ನ ನಡೆಯಬಾರದು.ನಾನು ಅವರಲ್ಲಿ ಮನವಿ ಮಾಡ್ತೆನೆ ಎಂದರು.
ಒಂದು ವೇಳೆ ಆ ರೀತಿ ಆಗೋದಾದ್ರೆ ಕಾನೂನು ಕ್ರಮ ತಗೊಂಡೆ ತಗೊಳ್ತಿವಿ. ಈಗಾಗಲೇ ಪೊಲೀಸ್ ಇಲಾಖೆ ಅವರು ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ ಎಂದರು.


