ತುರುವೇಕೆರೆ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯ ಡಾ.ಹರಿಪ್ರಸಾದ್ ಲಂಚ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರಿನ ಹನುಮಂತಪ್ಪಎಂಬುವರು ತಮ್ಮ ಸಂಬಂಧಿಗಳಾದ ಅಂಕಿತರನ್ನು ಹೆರಿಗೆಗಾಗಿ ಡಿ.19 ರಂದು ದಾಖಲು ಮಾಡಿದ್ದರು. ಹೆರಿಗೆ ವೈದ್ಯ ಡಾ.ಹರಿಪ್ರಸಾದ್ 3,000 ರೂ. ಲಂಚ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಹನುಮಂತಪ್ಪ ಲೋಕಾಯುಕ್ತ ಪೋಲೀಸರಿಗೆ ದೂರು ನೀಡಿದ್ದರು. ಗುರುವಾರ 3,000 ಹಣ ನೀಡುವ ಸಂದರ್ಭದಲ್ಲಿ ಎಸ್.ಪಿ. ವಾಲಿಪಾಷಾ ರವರ ಮಾರ್ಗದರ್ಶನದಲ್ಲಿ ಲೋಕಾಯುಕ್ತರು ಬಲೆಬೀಸಿದ್ದು, ರೆಡ್ ಹ್ಯಾಂಡ್ ಹಾಗಿ ವೈದ್ಯ ಹರಿಪ್ರಸಾದ್ ಸಿಕ್ಕಿ ಬಿದ್ದಿದ್ದಾರೆ.
ವೈದ್ಯರನ್ನು ವಶಕ್ಕೆ ಪಡೆದು ತಡರಾತ್ರಿಯವರೆಗೂ ವಿಚಾರಣೆ ನಡೆಸಲಾಯಿತು. ಟಿ.ಎಲ್ ಓ. ಶಿವರುದ್ರಪ್ಪ ಮೇಟಿ ರವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ಕೆ.ಎಲ್. ಎ ತುಮಕೂರು ಪಿ.ಎಸ್. ಸಿ ಆರ್ ನಂ 14/2023 ಯು/ಎಸ್ 7(ಎ) ಪಿ.ಸಿ. ಆಕ್ಟ್ ಪ್ರಕಾರ ಲೋಕಾಯುಕ್ತರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದು, ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ರಾಮರೆಡ್ಡಿ, ಸಲೀಂ ಅಹಮದ್, ಶಿವರುದ್ರಪ್ಪ ಮೇಟಿ ಸೇರಿದಂತೆ ಸಿಬ್ಬಂದಿ ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


