ಬೆಂಗಳೂರು: ಪುಸ್ತಕಗಳಿಗೆ ಸರ್ಕಾರದ ಪ್ರೋತ್ಸಾಹ ಹೆಚ್ಚಾದರೆ ಸಾಹಿತ್ಯದ ಮೌಲ್ಯ ಕಡಿಮೆಯಾಗುತ್ತದೆ. ಕಳಪೆ ಸಾಹಿತ್ಯ ಹೆಚ್ಚಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ವಿಶ್ವವಾಣಿ ಪುಸ್ತಕ ಹೊರ ತಂದಿರುವ ಆರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದು ಬಿಡುಗಡೆಯಾಗಿರುವ ಪುಸ್ತಕಗಳಲ್ಲಿ ಅರ್ಥಪೂರ್ಣವಾಗಿ ಬದುಕಿನ ಒಳ ಮರ್ಮ ಹೇಳುವ ಅಂಕಣಗಳು ಇದರಲ್ಲಿವೆ.
ವಿಶ್ವೇಶ್ವರ ಭಟ್ಟರು ಪ್ರತಿದಿನ ಹೊಸದನ್ನು ಹುಡುಕಿ ಜನರಿಗೆ ತಿಳಿಸುತ್ತಾರೆ. ಜನರಿಗೆ ಏನಾದರೂ ಹೇಳುವುದು ಬಹಳ ಕಷ್ಟ. ಅವರಲ್ಲಿ ಇರುವ ಚಿಂತನಾ ಶಕ್ತಿ ಸದಾ ಜೀವಂತ ಇರುವುದನ್ನು ನಾನು ಕಂಡಿದ್ದೇನೆ. ಅವರು ಒಬ್ಬ ಕೇವಲ ಪತ್ರಕರ್ತನಾಗಿ ಬೆಳೆದಿಲ್ಲ. ಒಬ್ಬ ಪತ್ರಕರ್ತ ಎಲ್ಲ ರಂಗದವರೊಂದಿಗೆ ಸಂಪರ್ಕ ಹೊಂದಿರದಿದ್ದರೆ, ಅವರು ಜನರ ಮನಸಿನಿಂದ ದೂರವಾಗುತ್ತಾನೆ ಎಂದರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ ಇದೆ. ಪತ್ರಕರ್ತರಿಲ್ಲದೆ ರಾಜಕಾರಣ ಇಲ್ಲ. ರಾಜಕಾರಣಿಗಳಿಲ್ಲದೆ ಪತ್ರಿಕೋದ್ಯಮ ಇಲ್ಲ. ಟೀಕೆ ಮಾಡಲಿಕ್ಕೆ ಆದರೂ ಪತ್ರಿಕೆಗಳಿಗೆ ರಾಜಕಾರಣಿಗಳು ಬೇಕು. ರಾಜಕಾರಣಿಗಳು ಭ್ರಮೆಯಲ್ಲಿರುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/F93PYUrewdsCfgROQBejv5
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ: https://www.youtube.com/channel/UCtrQuDOToxHu8dzMaHjoYXA


