ಪಾವಗಡ: ಸರ್ಕಾರಿ ಪಾಠಶಾಲೆಗಳು ಗ್ರಾಮೀಣ ಮಕ್ಕಳ ಬೆಳಕು ಚೆಲ್ಲುವ ವಿಶ್ವವಿದ್ಯಾಲಯಗಳು ಆಗಬೇಕು, ಸರ್ಕಾರಿ ಶಾಲೆಗಳು ಉಳಿಸುವುದು ಬೆಳೆಸುವುದು ಆಯಾ ಭಾಗದ ಗ್ರಾಮಸ್ಥರ ಕಾಯಕವಾಗಬೇಕು ಎಂದು ಸಮಾಜ ಸೇವಕಿ ಡಾ.ಸಾಯಿಸುಮನ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರದಂದು ಮಂಗಳವಾಡ ಗ್ರಾ ಪಂ.ನ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಂಗಳವಾಡ ಶಾಲಾ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಹಳೇ ವಿದ್ಯಾರ್ಥಿಗಳು ಮತ್ತು ಸಮಾಜ ಸೇವಕಿ ಸಾಯಿ ಸುಮನ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಡಾ.ಸಾಯಿಸುಮನ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ಗ್ರಾಮಸ್ಥರು, ಪೋಷಕರು ಕುಟುಂಬದ ಪ್ರತಿ ಪುಟಾಣಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಪ್ರವೇಶ ಮಾಡಿಸಬೇಕು. ಗ್ರಾಮೀಣ ಸರಕಾರಿ ಶಾಲೆಯ ಕನ್ನಡ ಮಾಧ್ಯಮ ಮಕ್ಕಳು ಯಾವ ಭಾಷೆಯ ಕಲಿಕಾರ್ಥಿಗಳಿಗೂ ಕಮ್ಮಿ ಇಲ್ಲವೆಂದು ಗ್ರಾಮೀಣರು ತೋರ್ಪಡಿಸಬೇಕಾಗಿದೆ, ಗ್ರಾಮೀಣ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ ಕಂಡ ಉತ್ತಮ ರಾಜನೀತಿ ಪಾಲನೆ ಮಾಡುವ ಸಮಾಜದ ಸುಧಾರಕರು ಆಗಿರುವ ಘಟನೆಗಳು ಇತಿಹಾಸ ಪುಟದಲ್ಲಿ ಎದ್ದು ಕಾಣುತ್ತಿವೆ ಎಂದರು.
ಸರ್ಕಾರಿ ಶಾಲೆಯ ಮಕ್ಕಳು ವಿದ್ಯೆಯಲ್ಲಿ ಮುಂದುವರಿಯಲು, ನಿರಂತರವಾಗಿ ತಂದೆ ತಾಯಿಗಳು ಗಮನಿಸುವ ಪ್ರಕ್ರಿಯೆ ಅಳವಡಿಸಿಕೊಂಡು, ಮನೆಯಂಗಳದಲ್ಲಿ ಕಲಿಕಾ ವಾತಾವರಣ ಏರ್ಪಡಿಸಿದರೆ ಹಳ್ಳಿಯ ಮಕ್ಕಳು ದೇಶದ ಉತ್ತಮ ಮಕ್ಕಳಾಗುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಅತಿಥಿ ಶಿಕ್ಷಣ ಇಲಾಖೆಯ ಬಿ ಆರ್ ಪಿ ರಂಗಸ್ವಾಮಿ ಮಾತನಾಡುತ್ತಾ, ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದ ಪುಟಾಣಿಗಳ ಸ್ನೇಹಜೀವಿಗಳಾಗಿದ್ದು, ಸರ್ಕಾರಿ ಶಾಲೆಗಳಿಗೆ ಪ್ರವೇಶ ಮತ್ತು ಬರುವ ವಿದ್ಯಾರ್ಥಿಗಳು ಸಮಾಜದಲ್ಲಿನ ಕಡು ಬಡುವರ ಮಕ್ಕಳಾಗಿದ್ದು, ಪ್ರಯುಕ್ತ ಶಾಲಾ ವಾತಾವರಣವು ಗ್ರಾಮೀಣ ಮಕ್ಕಳ ವೈಶಾಲ್ಯತೆಯನ್ನು ಹೆಚ್ಚಿಸುವ ಮಾದರಿ ಸರ್ಕಾರಿ ಶಾಲೆಗಳಾಗಿರುತ್ತವೆ, ಇಂತಹ ವಿಷಯಗಳನ್ನು ಗ್ರಾಮೀಣರು ಅರ್ಥೈಸಿಕೊಳ್ಳಬೇಕು, ಬಡತನದ ಮಕ್ಕಳು ಪಠ್ಯ ಪ್ರವಚನ ಕಲೆ ಸಾಹಿತ್ಯ ಆಧಾರಿತ ವಿಷಯಗಳನ್ನು ಶಾಲಾ ವಾರ್ಷಿಕೋತ್ಸವಗಳಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮಗಳು ಮಾಡುತ್ತಿರುವುದು ಸಂತಸ ಪಡುವ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಕುಮಾರ್, ಕಾಂಗ್ರೆಸ್ ಮುಖಂಡ ಶಿವಪ್ರಸಾದ್, ಸನೌಸ ಪ್ರಕಾ. ಮಾರುತೇಶ್, ಶಿರಾ ಕಸಪಾ ರೇಣುಕಮ್ಮ,ಉಪಾಧ್ಯಕ್ಷ ಹನುಮಂತ ರಾಯಪ್ಪ, ಸಿದ್ದೇಶ್ವರಪ್ಪ, ಸುನಿತಾ, ಸ್ವಾರಣ್ಣ, ತಿಮ್ಮರಾಜು, ಶಾಲಾ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣಪ್ಪ ಡಿಎಸ್ ಎಸ್ ಮುಖಂಡ ಈರಣ್ಣ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೋಷಕರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4