ತುರುವೇಕೆರೆ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ ತಾಲೂಕಿನ ಕರಡು ಮತದಾರರ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ತಹಶೀಲ್ದಾರ್ ಕುಂಞಿ ಅಹಮದ್ ತಿಳಿಸಿದರು. ಅವರು ತಾಲೂಕು ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೊದಲ ಪಟ್ಟಿಯಲ್ಲಿ ಪುರುಷ ಮತ್ತು ಮಹಿಳೆ ಸೇರಿ ಒಟ್ಟು 2258 ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ತಯಾರಿಸುವ ಸಂಬಂಧ ದಿ. 30—9–25 ರಿಂದ ದಿ. 6—11–25 ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ನೋಂದಣಿ ಅವಧಿ ಮುಕ್ತಾಯಗೊಂಡ ನಂತರ ಅಂತಿಮವಾಗಿ ದಿ. 25—11–25 ರಂದು ಅರ್ಹ ಪದವೀಧರರ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ತಾಲೂಕಿನಲ್ಲಿ ಪುರುಷರು-1464 ಮತ್ತು ಮಹಿಳೆಯರು-1086 ಸೇರಿ ಒಟ್ಟು 2258 ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದರು.
76–ತುರುವೇಕೆರೆ ಟೌನ್ ವ್ಯಾಪ್ತಿ– ಪುರುಷರು 705 ಮತದಾರರು ಮತ್ತು ಮಹಿಳೆಯರು–563 ಮತದಾರರು 77-ಮಾಯಸಂದ್ರ ಹೋಬಳಿ–ಪುರುಷ–705 ಮತ್ತು ಮಹಿಳೆಯರು-88 ಮತದಾರರು 78–ದಂಡಿನಶಿವಾರ ಹೋಬಳಿ-ಪುರುಷರು–320 ಮತ್ತು ಮಹಿಳೆಯರು–257 ಮತದಾರರು 79–ದಬ್ಬೇಘಟ್ಟ ಹೋಬಳಿ–ಪುರುಷರು–274 ಮತ್ತು ಮಹಿಳೆಯರು–178 ಅಂತಿಮ ಆಗ್ನೇಯ ಪದವೀಧರರ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಸುಳ್ಳು ಮಾಹಿತಿಗೆ ಕಾನೂನು ಕ್ರಮ:
ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯಪಡೆ ಚಿರತೆ ಸೆರೆ ಹಿಡಿಯುವಲ್ಲಿ ಕಾರ್ಯಗತವಾಗಿವೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಅನಾವಶ್ಯಕವಾಗಿ ಬೇರೆ ಭಾಗದ ಫೋಟೋ ಹಾಗೂ ವಿಡಿಯೋಗಳನ್ನು ತುರುವೇಕೆರೆ ಎಂದು ತೋರಿಸಿ ಹಾಕಿದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮೊನ್ನೆ ಯಾರೋ ಹಾಕಿದ ಪೋಸ್ಟರ್ ಗುಜರಾತ್ ಭಾಗದ್ದು, ಇದೇ ರೀತಿ ಮುಂದುವರೆದಲ್ಲಿ ಕ್ರಮ ನಿಶ್ಚಿತ ಎಂದು ತಹಶೀಲ್ದಾರ್ ಕುಂಞಿ ಅಹಮದ್ ಎಚ್ಚರಿಕೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


