ಸರಗೂರು: ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಶಕ್ತಿಕೇಂದ್ರ ಇದ್ದ ಹಾಗೆ, ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸದಸ್ಯರ ಯೋಜನೆಗಳೇ ಅಂತಿಮ. ವಾರ್ಡ್ ನಿರ್ವಹಣೆ ಜವಾಬ್ದಾರಿ ಅವರ ಮೇಲಿದೆ ಎಂದು ಶಾಸಕ, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ, ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಚರ್ಚಿಸಿ, ಅನುದಾನ ತರುತ್ತಾರೆ. ಅದೇ ಮಾದರಿಯಲ್ಲಿ ಸದಸ್ಯರು ತಮ್ಮ ಶಕ್ತಿಕೇಂದ್ರವಾದ ಗ್ರಾಮ ಪಂಚಾಯಿತಿಯಿಂದ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ತಂದು ನಿರ್ವಹಣೆ ಮಾಡುತ್ತಾರೆ. ತಮ್ಮ ವಾರ್ಡ್‌ನಲ್ಲಿನ ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಿ ಮಾಡುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿಯೂ ನಾನಾ ಯೋಜನೆ ಗಳಿದ್ದು ಅದನ್ನು ಸದಸ್ಯರು ಕಾರ್ಯರೂಪಕ್ಕೆ ಕೆಲಸ ತರಬೇಕು,” ಎಂದು ಸಲಹೆ ನೀಡಿದರು.

“ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಆರೇಳು ಬಾರಿ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಲಾಗಿದ್ದು, ಒಂದೊಂದು ಗ್ರಾಮಕ್ಕೆ 40ರಿಂದ 50 ಲಕ್ಷ ರೂ. ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗಿದೆ. ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರೂ ಸ್ಪರ್ಧಿಸಿ, ಗೆಲುವು ಸಾಧಿಸಿ,” ಎಂದು ಶುಭ ಹಾರೈಸಿದರು.
”ಪಂಚಾಯಿತಿಯು ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಬೇಕು. ಜನನ, ಮರಣ ಉಪನೋಂದಣಿ, ಸೂಚನಾಫಲಕ, ಗ್ರಾಮ ಪಂಚಾಯಿತಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡುವ ಸಮಯ ಹೀಗೆ ಹತ್ತು ಹಲವು ಜನಪರ • ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವುದು ಸಂತಸ ತಂದಿದೆ. ಇದಲ್ಲದೆ ಪಕ್ಕದಲ್ಲೇ ಸುಂದರವಾಗಿ ಗ್ರಂಥಾಲಯ ನಿರ್ಮಿಸಲಾಗಿದೆ. ಇದನ್ನು ಮಕ್ಕಳು ಬಳಸಿಕೊಳ್ಳಬೇಕು,” ಎಂದು ಹೇಳಿದರು.
ಉತ್ತಮ ಹಾಗೂ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು . ಅಧಿಕಾರಿಗಳು ಜನ ಪ್ರತಿನಿಧಿಗಳು ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಬಗ್ಗೆ ಎಂಬುದನ್ನು ಗಮನಿಸಿ ಕೊಡಬೇಕು ಎಂದರು.
ಹಂಚೀಪುರ ಮಠದ ಚನ್ನಬಸವಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪಂಚಾಯಿತಿ ಅಧ್ಯಕ್ಷೆ ರುಕ್ಕಿಣಿ ಪುಟ್ಟಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನಟರಾಜು, ಸದಸ್ಯರು ಚಂದ್ರಶೇಖರ, ಗೀತಾ ದೇವರಾಜುಸ್ವಾಮಿ,ಡಿ ಎಸ್ ಜಯರಾಜು,ಕರಿಗೌಡ ,ಮಣಿ ನಾಗರಾಜು, ಮಂಜುಳ ಬಸವಣ್ಣ, ನಾಗರಾಜು, ಸತೀಶ್, ಶಿವಮ್ಮ ನಾಗಣ್ಣ, ಶೋಭಾ ಶಿವಲಿಂಗ ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ, ಬಸವ ಬಳಗದ ಅಧ್ಯಕ್ಷ ಗಣಪತಿ, ಗೌಡಿಕೆ ತಮ್ಮಯ್ಯಪ್ಪ, ಶಿವಣ್ಣ ಮಾದೇವಪ್ಪ, ಬಸವಣ್ಣ,ಅಕ್ರಮ ಸಕ್ರಮ ಸಮಿತಿ ಸದಸ್ಯ ಎಸ್.ಎಸ್.ಪ್ರಭುಸ್ವಾಮಿ, ಮಹೇಶ್, ಪುಟ್ಟಣ್ಣ, ಬಸವರಾಜು ,ಮಹದೇವಸ್ವಾಮಿ, ಪ್ರಕಾಶ್, ತಾಪಂ ಕಾರ್ಯನಿರ್ವಹಣಾಧಿ ಕಾರಿ ಡಿ.ಎಸ್.ಪ್ರೇಮ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಪ್ಪ,ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


