ತುಮಕೂರು: ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಇತ್ತೀಚಿನ ದಿನಗಳಲ್ಲಿ ಮನೆ ಮಾತಾಗುತ್ತಿದ್ದಾರೆ. ಇದೀಗ ಅವರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ.
ಎಸಿಬಿ ಅಧಿಕಾರಿಗಳಿಂದ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಇವರುಗಳ ಹೋರಾಟದಿಂದ ಬಡ ರೈತರು ಮತ್ತು ಮಧ್ಯಮ ವರ್ಗದ ಸಾರ್ವಜನಿಕರು ಅಲ್ಪಪ್ರಮಾಣದ ನಿಟ್ಟುಸಿರು ಬಿಡುತ್ತಿದ್ದಾರೆ. ತಿಂಗಳಲ್ಲಿ ಒಬ್ಬ ಭ್ರಷ್ಟ ಅಧಿಕಾರಿಗಳು, ಸಿಕ್ಕಿ ಹಾಕಿಕೊಂಡು ಜೈಲು ಪಾಲಾಗುತ್ತಿದ್ದಾರೆ.
ತುಮಕೂರು ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ನಿವೇಶನದ ಈ ಸ್ವತ್ತು ಮಾಡಿಸಿಕೊಳ್ಳಲು ಅರುಣ್ ಕುಮಾರ್ ಎಂಬವರು ಅರ್ಜಿ ನೀಡಿದ್ದು, ಪಂಚಾಯಿತಿ ಕಾರ್ಯದರ್ಶಿ ಶ್ರೀಧರ್ 7,500 ಲಂಚಕ್ಕೆ ಬೇಡಿಕೆ ಇಟ್ಟು 3, 000 ಹಣ ಮುಂಗಡವಾಗಿ ಪಡೆದುಕೊಂಡಿದ್ದ. ಉಳಿದ 4,500 ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಸಾಮಾಜಿಕ ಕಾರ್ಯಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಅವರ ಹೋರಾಟದಿಂದಾಗಿ ಸಾರ್ವಜನಿಕ ವಲಯದಲ್ಲಿ, ಎಸಿಬಿ ಅಧಿಕಾರಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೆಟ್ಟಿ ಅಗ್ರಹಾರ ನಾಗರಾಜು
ಜಿಲ್ಲಾ ಪಂಚಾಯತ್ CEO ವಿದ್ಯಾಕುಮಾರಿ ನಿರ್ಲಕ್ಷ್ಯತಾಲ್ಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್ ಕುಮ್ಮಕ್ಕಿನಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೇಳೋರು ಇಲ್ಲ ಕೇಳೋರು ಇಲ್ಲವಂತ ಆಗಿದೆ NREG ವರ್ಕ್ ಕಳಪೆ ಗುಣಮಟ್ಟದ ಕಾಮಗಾರಿ ಕೆಲವು ಕೆಲಸ ಮಾಡದೆ ಬಿಲ್ ಮಾಡಿಕೊಳ್ಳುತ್ತಾರೆ. ಸೀಟ್ ಲೈಟ್ ಬಲ್ಬ್ ಹಗರಣ ಮೋಟಾರ್ ಪಂಪ್ ಸೆಟ್ ಕೊಳ್ಳುವುದರಲ್ಲಿ ಕಳಪೆ ಹಗರಣ NREG ಹಣ ಬಿಡುಗಡೆ ಮಾಡಲು ಇಂಜಿನಿಯರ್ pdo 30% ಕಮಿಷನ್ ದಂಧೆ ನಡೆಯುತ್ತಿದೆ. ಒಟ್ಟಾಗಿ ಹೇಳುವುದಾದರೆ ಗ್ರಾಮಪಂಚಾಯತ್ ಗಳಲ್ಲಿ ಸಾಲು ಸಾಲು ಹಗರಣ ಸರಮಾಲೆಯೇ ಸರಿ ಕ್ರಮಕೈಗೊಳ್ಳಬೇಕಾದ ಜಿಲ್ಲಾಪಂಚಾಯತ್ CEO ಮೌನ ಸಾರ್ವಜನಿಕರು ಎಷ್ಟೇ ದೂರುಗಳು ನೀಡಿದರು ಒಂದಕ್ಕೂ ಕ್ರಮಕೈಗೊಳ್ಳುವುದಿಲ್ಲ. ಮೊದಲು ಜಿಲ್ಲಾ ಪಂಚಾಯತ್CEO ವರ್ಗವಣೆಯಾಗಿ ಉತ್ತಮ ಜನಸ್ನೇಹಿ CEO ಬಂದರೆ ಮಾತ್ರ ಇದಕ್ಕೆಲ್ಲ ಪರಿಹಾರ ಎಂದು ಸಾಮಾಜಿಕ ಹೋರಾಟಗಾರ ಪತ್ರಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆ ವೇಳೆ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ, ಇನ್ಸ್ ಪೆಕ್ಟರ್ ವಿರೇಂದ್ರ, ವಿಜಯಲಕ್ಷ್ಮಿ, ನರಸಿಂಹರಾಜು, ಚಂದ್ರು ಶಿವಣ್ಣ, ನವೀನ್ ಕುಮಾರ್, ಸುರೇಶ್ ಇನ್ನಿತರರಿದ್ದರು.
ವರದಿ : ಟೈಗರ್ ನಾಗ್ ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5