ಸರಗೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡ ಜ್ಯೋತಿ ರಥ’ವು ತಾಲ್ಲೂಕು ಆಡಳಿತ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ತಹಶೀಲ್ದಾರ್ ಮೋಹನಕುಮಾರಿ, ಇಓ ಪ್ರೇಮಕುಮಾರ್, ಕಬಿನಿ ನಿರಾವರಿ ಉಪವಿಭಾಗ ಎಇಇ ಕೆ ಉಷಾ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಅವರು ಗುಂಡ್ಲುಪೇಟೆ ತಾಲೂಕಿನಿಂದ ಬಂದ ಶನಿವಾರ ದಂದು ಪಟ್ಟಣದ ಮಹಾವೀರ ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನದ ಕನ್ನಡ ಜ್ಯೋತಿ ರಥವನ್ನು ಭುವನೇಶ್ವರಿ ಪ್ರತಿಮೆಗೆ ಹೂಮಾಲೆ ಹಾಕಿ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಕನ್ನಡ ರಥ ಸಂಚರಿಸಿದಲ್ಲೆಲ್ಲ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ನೆರೆದು ಸ್ವಾಗತವನ್ನು ಕೋರಿದ್ದಾರೆ. ಇದು ಕನ್ನಡಿಗರಲ್ಲಿ ಸ್ವಾಭಿಮಾನ ತುಂಬುವಲ್ಲಿ ಮತ್ತು ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಕನ್ನಡ ನಾಡಿನ ಕಲೆ ಸಾಹಿತ್ಯ ನೃತ್ಯ ಸಂಗೀತ ಉತ್ಕೃಷ್ಟವಾದದ್ದು, ಶ್ರೀಮಂತವಾದದ್ದು ಈ ನಾಡಿನ ಶಿಲ್ಪ ಕಲೆಗೆ ಮನಸೋಲದವರೇ ಇಲ್ಲ. ನಮ್ಮ ನೆಲ ಜಲ ಮತ್ತು ಭಾಷೆ ಹಾಗೂ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ, ಎಲ್ಲರೂ ಸಹೋದರ ಭಾವನೆ ಹೊಂದಿರಬೇಕು. ಕನ್ನಡ ಭಾಷೆ.ಸಾಹಿತ್ಯ ಸಂಸ್ಕೃತಿ ಕಲೆಯನ್ನು ಗೌರವಿಸಬೇಕು ಎಂದರು.
ಕರ್ನಾಟಕದ ಬಹುತೇಕ ಜನರಿಗೆ ಕನ್ನಡ ಮಾತೃಭಾಷೆ ಆಗಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ದಮನ್ ಮತ್ತು ದಿಯುಗಳಲ್ಲಿಯೂ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣಿನೀಯ ಕನ್ನಡಿಗರು ಇದ್ದಾರೆ ಎಂದು ಹೇಳಿದರು.
ರಥವನ್ನು ಬರಮಾಡಿಕೊಂಡ ನಂತರ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ರಥವನ್ನು ಸಂಚರಿಸಿ ನಂತರ ಎಚ್.ಡಿ.ಕೋಟೆ ತಾಲೂಕಿಗೆ ಕಳಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಇಓ ಪ್ರೇಮಕುಮಾರ್, ಕಬಿನಿ ನಿರಾವರಿ ಉಪವಿಭಾಗ ಎಇಇ ಕೆ ಉಷಾ, ಗುಂಡ್ಲಪೇಟೆ ತಹಶೀಲ್ದಾರ್ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಗ್ರಾಮೀಣ ಮಹೇಶ್, ಪಪಂ ಸದಸ್ಯ ಚೆಲುವ ಕೃಷ್ಣ, ಗ್ರಾಪಂ ಸದಸ್ಯರು ಕುರ್ಣೇಗಾಲ ಬೆಟ್ಟ ಸ್ವಾಮಿ, ಅಜೀತ್ ಕುಮಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್, ಶ್ರೀನಿವಾಸ, ಮುಖಂಡರು ಚೆಲುವರಾಜು, ನಾಗರಾಜರಾಮ್, ಲಿಂಗಚಾರ್, ಗುತ್ತಿಗೆದಾರ ಬಸವರಾಜು, ವಸಂತ ಪಾಟೀಲ್, ಜವರನಾಯಕ , ಭಾಸ್ಕರ್, ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್, ವಸಂತಕುಮಾರ್, ಶಿಕ್ಷಕ ಬಂಗಾರಯ್ಯ,ಕಂದಾಯ ಇಲಾಖೆ ಸಿಬ್ಬಂದಿಗಳು ಮುಜೀಬ್, ಇನ್ನೂ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx