ಲಕ್ನೋ: ಮದುವೆ ಕಾರ್ಯಕ್ರಮಗಳು ಮುಗಿದು ಮೆರವಣಿಗೆ ಕೂಡಾ ಅದ್ದೂರಿಯಾಗಿ ನಡೆದಿತ್ತು. ಆದರೆ ವರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಬಳಿಯ ಶಿವರಾ ಗ್ರಾಮದಲ್ಲಿ ನಡೆದಿದೆ.
ದೆಹಲಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ನೌಕರ ಜ್ಞಾನ್ ಸಿಂಗ್ ಯಾದವ್ ಅವರ ಕಿರಿಯ ಮಗ ಸತ್ಯೇಂದ್ರ ಯಾದವ್ ಸಾವಿಗೆ ಶರಣಾಗಿರುವ ಯುವಕನಾಗಿದ್ದಾನೆ.
ರತನ್ ಪುರ ಗ್ರಾಮದ ಯುವತಿಯನ್ನು ಸತ್ಯೇಂದ್ ಯಾದವ್ ಮದುವೆಯಾಗಿದ್ದು, ವಧು-ವರವನ್ನು ಮನೆಯವರು ಅದ್ದೂರಿ ಸ್ವಾಗತಿಸಲಾಗಿತ್ತು. ಮದುವೆ ಸಮಾರಂಭದಲ್ಲಿ ಓಡಾಡಿ ಓಡಾಡಿ ಸುಸ್ತಾಗಿದ್ದ ಎಲ್ಲರೂ ಮಧ್ಯಾಹ್ನ ಮಲಗಿದ್ದರು. ವರ ಕೂಡಾ ಸಂಜೆ ವೇಳೆ 2ನೇ ಮಹಡಿಯ ಕೊಠಡಿಗೆ ಹೋಗಿದ್ದ. ಆದರೆ ಎಷ್ಟು ಹೊತ್ತಾದರೂ ವರ ಬರದಿದ್ದಾಗ ಮನೆಯವರು ಬಾಗಿಲು ಬಡಿದಿದ್ದಾರೆ. ಆದ್ರೆ ಆತ ಬಾಗಿಲು ತೆಗೆದಿರಲಿಲ್ಲ. ಇದರಿಂದ ಆತಂಕಗೊಂಡು ಬಾಗಿಲು ಮುರಿದು ನೋಡಿದರೆ, ಸತ್ಯೇಂದ್ರ ಯಾದವ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನೂರಾರು ಕನಸುಗಳೊಂದಿಗೆ ಮದುವೆಯಾಗಿದ್ದ ವಧು, ವರನ ಸಾವನ್ನು ಕಂಡು ಮೂರ್ಛೆ ಹೋಗಿದ್ದು, ಆಕೆಯ ಪೋಷಕರು ಮಗಳ ಭವಿಷ್ಯ ನೆನೆದು ಕಂಗಾಲಾಗಿದ್ದಾರೆ. ವಿವಾಹ ಕಾರ್ಯಕ್ರಮ ಮುಗಿದು ಕೇವಲ 2 ಗಂಟೆಗಳಲ್ಲಿಯೇ ವರ ಸಾವಿಗೆ ಶರಣಾಗಿದ್ದ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA