ದಾವಣಗೆರೆ: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಸಂಸ್ಕೃತಿ, ಸಂಸ್ಕಾರ ಹೊಂದಿದ್ದು, ಜೈನ ಧರ್ಮದ ಬೆಳವಣಿಗೆಗೆ ಧೈರ್ಯ ಮತ್ತು ಆತ್ಮ ವಿಶ್ವಾಸ ಅತಿ ಅಗತ್ಯವಾಗಿದೆ ಎಂದು ಹಿರಿಯ ಶ್ರಾವಕಿ, ಸ್ಥಾಪಕ ಅಧ್ಯಕ್ಷೆ, ಮಾರ್ಗದರ್ಶಿಗಳಾದ ಉಷಾ ಜಯಪ್ರಕಾಶ್ ತಿಳಿಸಿದರು.
ಅವರಿಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ — 8ರ ದಾವಣಗೆರೆ ಜೈನ್ ಮಿಲನ್ ದಾವಣಗೆರೆ, ಶ್ರೀ ಆದಿನಾಥ ಜೈನ್ ಮಿಲನ್, ಸಮಸ್ತ ದಿಗಂಬರ ಜೈನ ಸಮಾಜ ದಾವಣಗೆರೆ ಇವರ ಆತಿಥ್ಯದಲ್ಲಿ ನಡೆದ ದಾವಣಗೆರೆ ವಿಭಾಗ ಮಟ್ಟದ ಕಿರಿಯರ ಹಾಗೂ ಹಿರಿಯರ ಜಿನ ಭಜನೆ ಸ್ಪರ್ಧೆಯ 8 ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.
ಜೈನ ಧರ್ಮದ ಬೆಳವಣಿಗೆಗೆ ಉತ್ತಮ ಮಾರ್ಗದರ್ಶನ –ಒಗ್ಗಟ್ಟು ಅಗತ್ಯ. ಜೈನ ಧರ್ಮ ಉತ್ತಮ ಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ಧರ್ಮದ ಹಲವಾರು ವಿಭಾಗಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಬಗ್ಗೆ ನನಗೆ ಸಂತಸ ತಂದಿದೆ, ವನಿತ ಸಮಾಜ ಹಾಗೂ ಪದ್ಮಂಬಾ ಮಹಿಳಾ ಸಮಾಜದ ಏಳಿಗೆ ನನ್ನ ಪ್ರತಿಭೆ ತೋರಿಸಲು ಸಹಕಾರಿಯಾಗಿದೆ. ಸಮಾಜ ಸೇವೆ ಸಂತಸ ತಂದಿದೆ ಎಂದು ಅವರು, ಯಾವುದಕ್ಕೂ ಧೈರ್ಯ ಆತ್ಮ ವಿಶ್ವಾಸ ಅಗತ್ಯ ಎಂದರು.
ಎಲ್ಲರ ಸಹಕಾರದಿಂದ ನಮ್ಮ ಬೆಳವಣಿಗೆ ಯಾಗಿದ್ದು ಯಾವುದೇ ಸ್ಪರ್ಧಾ ಕಾರ್ಯಕ್ಕೆ ಪ್ರಯತ್ನ ಅಗತ್ಯವಾಗಿದ್ದು, ಸ್ಪರ್ಧೆ ಪ್ರಶಸ್ತಿಗೆ ಸೀಮಿತವಾಗಬಾರದು ಎಂದರು.
ಭಾರತೀಯ ಜೈನ ವಲಯ– 8ರ ದಾವಣಗೆರೆ ವಿಭಾಗದ ಕಾರ್ಯದರ್ಶಿ ಭರತ್ ರಾಜ್. ಎಸ್. ಹಜಾರಿ ಮಾತನಾಡಿ, ಜಿನ ಭಜನಾ ಕಾರ್ಯಕ್ರಮ ಈ ಹಿಂದೆ ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನಡೆದು ಯಶಸ್ಸು ಕಂಡಿತ್ತು. ಈಗ ದಾವಣಗೆರೆಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಭಾರತೀಯ ಜೈನ್ ಮಿಲನ್ ವಲಯ — 8 ರ ಮಂಗಳೂರು ವಿಭಾಗದ ಸೋಮಶೇಖರ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಜಿನ ಭಜನ ಸಂಸ್ಕೃತಿ ಬೆಳೆಸುವುದು ಅಗತ್ಯ, ಸ್ಪರ್ಧಾತ್ಮಕ ಮನೋಭಾವನೆಗಳು ಅಗತ್ಯ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ –ಸಂಸ್ಕಾರ ಬೆಳವಣಿಗೆಗೆ ಸಹಕಾರಿಯಾಗಲಿದ್ದು ಮನೆ –ಮನಗಳಲ್ಲಿ ಜಿನ ಸಂಸ್ಕೃತಿ ಬೆಳೆಯಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ್ ಮಿಲನ ದಾವಣಗೆರೆ ವಿಭಾಗದ ವಲಯ –8 ರ ಎಚ್.ಪಿ.ಸುಮತಿ ಕುಮಾರ್ ಮಾತನಾಡಿ, ಜಿನ ಭಜನೆ ಪರಿಕಲ್ಪನೆ, ಮಾತೆ ಅನಿತಾ ಸುರೇಂದ್ರ ಕುಮಾರ ರವರ ಕನಸಿನ ಕೂಸು, ದಾವಣಗೆರೆ ಜೈನ ಸಮಾಜ ಬಲಿಷ್ಠ ವಾಗಿದ್ದು, ಇದರ ರೂವಾರಿ ಉಷಾ ಜಯಪ್ರಕಾಶ್ ರವರ ಕೊಡುಗೆಯನ್ನು ಸ್ಮರಿಸಿದರು.
ಭಗವಂತನ ಸ್ಮರಣೆಯಿಂದ ನಮ್ಮ ಸಮಾಜ ಮುನ್ನಡೆಯುತ್ತಿದ್ದು, ಜಿನ ಭಜನೆ ಹೊಸ ಆಯಾಮ ನೀಡಿದೆ. ಇದರಿಂದ ಧರ್ಮ ಪ್ರಭಾವನೆಯಾಗಿ, ಮನೆ, ಮನ, ಸಮಾಜದಲ್ಲಿ ಪ್ರಭಾವ ಬೀರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ದಾವಣಗೆರೆ ವಿಭಾಗದ ಅಧ್ಯಕ್ಷ ಶಾಂತರಾಜು ವನಕುದುರೆ, ಆದಿನಾಥ ಜೈಮಿಲನ್ ಅಧ್ಯಕ್ಷ ಪ್ರವೀಣ್ ಸುದರ್ಶನ್ ಶ್ರೀ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ವರ್ಷಹೊಲಿ, ಪ್ರೀತಮ್ ದುಂಡಸಿ, ಸಂತೋಷ್ ಜೈನ್ , ಅರಿಹಂತ್ ದುಂಡಣ್ಣನವರ್, ವಿಮಲ್ ಕುಮಾರ್ ಬೋಗಾರ್, ಆರ್. ಪದ್ಮರಾಜ್, ಪ್ರಸನ್ನ ಚಂದ್ರಪ್ರಭು ,ಚೇತನ ಪದ್ಮರಾಜ್ ಬರಿಗಾಲಿ ಇನ್ನಿತರರು ಭಾಗವಹಿಸಿದ್ದರು.
ದಾವಣಗೆರೆ ವಿಭಾಗದ ಎಲ್ಲ ಜೈನ್ ಮಿಲನ್ ಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಖಜಾಂಚಿಗಳು, ಹಾಗೂ ಪದಾಧಿಕಾರಿಗಳು, ಶ್ರೀ ಮಹಾವೀರ ಸಂಘ, ಶ್ರೀ ಮಹಾವೀರ ಯುವ ಮಂಚ್, ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜ,ಅಭಿಕ್ಷಣ ಸ್ವಾಧ್ಯಾಯ ಮಂಡಳಿ, ದಾವಣಗೆರೆ ದಿಗಂಬರ ಜೈನ ಸಮಾಜ, ಸೇರಿದಂತೆ ವಿವಿಧ ಜೈನ ಸಂಘಟನೆಗಳು ಶ್ರಾವಕ ಶ್ರಾವತಿಯರು ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹರ್ಷ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ನಾಗಶ್ರೀ ಜಯಕೀರ್ತಿ ಸ್ವಾಗತಿಸಿದರು. ಸವಿತಾ ಅಭಿನಂದನ್ ಮಂಗಳಾಚಾರಣೆ ನೆರವೇರಿಸಿದರು. ವಿನೋದ ವಂದಿಸಿದರು. ಈ ಜಿನ ಭಜನಾ ತಂಡದಲ್ಲಿ ದಾವಣಗೆರೆ ವಿಭಾಗದಿಂದ ಸುಮಾರು 60 ತಂಡಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q