ಗುಬ್ಬಿ: ಗುಬ್ಬಿ ತಾಲೂಕಿನ ಕಡಬಾ ಮಜರೆ ಹೊಸಪಾಳ್ಯ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 6 ಜನರನ್ನ ಗುಬ್ಬಿ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಸೋಮವಾರ ಬಂಧಿಸಲಾಗಿದೆ.
ಮಧ್ಯಾಹ್ನ 3 ಗಂಟೆಗೆ ನಡೆದ ಕಾರ್ಯಾಚರಣೆಯ ವೇಳೆ ಜೂಜಿನಲ್ಲಿ ತೊಡಗಿದ್ದವರಿಂದ 6 ಮೊಬೈಲ್ ಪೋನ್ ಮತ್ತು 4 ದ್ವಿಚಕ್ರ ವಾಹನ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 6,200 ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಿಪಿಐ ಎಫ್ ಕೆ ನದಾಫ್ ಹಾಗೂ ಸಿಬ್ಬಂದಿಗಳಾದ ಪೃಥ್ವಿರಾಜ್, ಪಾತರಾಜು, ಧನಂಜಯ ಮೊದಲಾದವರು ದಾಳಿ ನಡೆಸಿದ ತಂಡದಲ್ಲಿದ್ದರು. ಘಟನೆ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700