ಗುಬ್ಬಿ: ಕಡಬ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದ ಎಸ್ ಬಿಐ ಬ್ಯಾಂಕ್ ನ ಎಟಿಎಂನಲ್ಲಿ ಮಂಗಳವಾರ ತಡರಾತ್ರಿ ಖದೀಮರು ಗ್ಯಾಸ್ ಕಟರ್ ಬಳಸಿ ಲಕ್ಷಾಂತರ ರೂ. ಗಳನ್ನು ದೋಚಿದ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಮೈಸೂರು ಸಂಪರ್ಕದ ಮಾರ್ಗ ಮಧ್ಯೆಯ ಕಡಬ ಗ್ರಾಮ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ವ್ಯಾಪಾರ ಕೇಂದ್ರ ಎನಿಸಿದೆ. ಬಸ್ ನಿಲ್ದಾಣ ಸಮೀಪ ಪೊಲೀಸ್ ಉಪ ಠಾಣೆಗೆ ಕೂಗಳತೆಯ ಎಸ್‌ಬಿಐ ಎಟಿಎಂ ಗೆ ಕಟರ್ ಮೂಲಕ ಕನ್ನ ಹಾಕಿರುವ ಕಳ್ಳರು ಸುಮಾರು 13 ರಿಂದ 14 ಲಕ್ಷ ರೂಪಾಯಿ ಹಣ ದೋಚಿದ್ದಾರೆ ಎನ್ನಲಾಗಿದೆ.
ವಿಚಾರ ತಿಳಿದ ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇನ್ನಿತರ ಸಾಕ್ಷ್ಯಾಧಾರಕ್ಕೆ ಮುಂದಾಗಿದ್ದು, ತುಮಕೂರು ಎಎಸ್ಪಿ ಪುರುಷೋತ್ತಮ್ ಸೇರಿದಂತೆ ತಿಪಟೂರು ಡಿವೈಎಸ್ಪಿ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಜಾಡು ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗುಬ್ಬಿ ತಾಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಒಂದರ ಮೇಲೊಂದು ನಡೆದಿವೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚೇಳೂರು ಗ್ರಾಮದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ದರೋಡೆ ಯತ್ನ ನಡೆದಿತ್ತು. ವಿಫಲ ಯತ್ನ ನಡೆಸಿದ್ದ ಕಳ್ಳರ ಎಡೆ ಮುರಿ ಕಟ್ಟುವ ಕೆಲಸ ನಡೆದಿತ್ತು. ಆದರೆ ಎಟಿಎಂ ಕಳ್ಳತನ ಪ್ರಮುಖ ಹೋಬಳಿ ಕೇಂದ್ರ ಕಡಬದಲ್ಲಿ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


