nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆಟವಾಡುತ್ತಾ ಲೂಡೋ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು

    February 23, 2026

    ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

    February 23, 2026

    ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು

    February 23, 2026
    Facebook Twitter Instagram
    ಟ್ರೆಂಡಿಂಗ್
    • ಆಟವಾಡುತ್ತಾ ಲೂಡೋ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು
    • ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ
    • ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು
    • ಹಾಸನದಲ್ಲಿ ಭೀಕರ ಅಪಘಾತ: ಬುಲೆಟ್‌ ನಿಂದ ಬಿದ್ದು 23 ವರ್ಷದ ಯುವತಿ ಸಾವು, ಮತ್ತೊಬ್ಬಳು ಗಂಭೀರ
    • ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
    • ನಟ ದರ್ಶನ್‌ ಗೆ ಹೈಕೋರ್ಟ್‌ನಿಂದ ಸಣ್ಣ ರಿಲೀಫ್; ಗನ್ ಲೈಸೆನ್ಸ್ ಅಮಾನತಿಗೆ ತಡೆ
    • ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
    • ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುಣಮಟ್ಟದ ಕಾಮಗಾರಿಗಳಾಗದಿದ್ದರೆ ಕ್ರಮ ಖಚಿತವೆಂದ ಸಚಿವ ಸತೀಶ್‌ ಜಾರಕಿಹೊಳಿ
    ರಾಜ್ಯ ಸುದ್ದಿ June 15, 2023

    ಗುಣಮಟ್ಟದ ಕಾಮಗಾರಿಗಳಾಗದಿದ್ದರೆ ಕ್ರಮ ಖಚಿತವೆಂದ ಸಚಿವ ಸತೀಶ್‌ ಜಾರಕಿಹೊಳಿ

    By adminJune 15, 2023No Comments2 Mins Read
    satheesh jarakiholi2

    ಗೋಕಾಕ: ನಗರದ ನಾಕಾ ನಂ. 1 ರಿಂದ ಡಿವೈಎಸ್ಪಿ ಕಚೇರಿವರೆಗೆ ನಿರ್ಮಿಸಿರುವ ಚರಂಡಿ ರಸ್ತೆಯಿಂದ 2 ಅಡಿ ಎತ್ತರವಾಗಿ ನಿರ್ಮಿಸಿದ್ದು, ಮಳೆ ನೀರು ಹೋಗಲು ತೊಂದರೆಯಾದರೆ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

    ಬುಧವಾರ ನಗರದ ತಾಪಂ ಸಭಾಂಗಣದಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರ ಮೇಲಿದ್ದು , ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆದರೆ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ, ಜನರಿಗೆ ಅನುಕೂಲವಾಗುವಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೊಂಡು ಅವಧಿ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು.


    Provided by
    Provided by

    ಲೋಕೋಪಯೋಗಿ ಇಲಾಖೆಯಲ್ಲಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ಪಟ್ಟಿ ಮಾಡಿ ಅಂತಹವರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡದೆ, ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುವಂತೆ ಕ್ರಮ ಕೈಗೊಳ್ಳಬೇಕು . ಒಮ್ಮೆ ರಸ್ತೆ ಮಾಡಿದರೆ ಕನಿಷ್ಠ 10 ವರ್ಷಗಳ ವರೆಗೆ ಬಾಳಿಕೆ ಬರುವಂತೆ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.

    ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುತುವರ್ಜಿ ವಹಿಸಬೇಕು. ಲೋಳಸೂರ ಸೇತುವೆ , ವಸತಿ ನಿಲಯಗಳು, ನ್ಯಾಯಾಲಯ ಕಟ್ಟಡಕ್ಕೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ಮಾಡುವುದರ ಜೊತೆಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ವಗೊಳಿಸಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದರು.

    ನಗರದ ನಾಕಾ ನಂ. 1 ರ ರಸ್ತೆಯನ್ನು ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿಯವರೆಗೆ ಸಂಚಾರಕ್ಕೆ ತೊಂದರೆಯಾಗದಂತೆ ದುರಸ್ಥಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರಸಭೆ ಅಧೀನದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಸಂರ್ಕೀಣಗಳನ್ನು ಜನರಿಗೆ ಉಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು. ಇಲಾಖೆಯಿಂದ ಸಾಕಷ್ಟು ಬಂಡವಾಳ ಹಾಕಿ ವಾಣಿಜ್ಯ ಸಂರ್ಕೀಣಗಳನ್ನು ಕಟ್ಟಿದ್ದು, ಜನರಿಗೆ ಅನುಕೂಲವಾಗುವಂತೆ ಬಾಡಿಗೆ ಕೊಡದೆ ಬಾಕಿ ಉಳಿದಿರುವ ಸಂರ್ಕೀಣಗಳನ್ನು ಅತಿ ಶೀಘ್ರದಲ್ಲೇ ವ್ಯಾಪಾರಿಗಳಿಗೆ ಬಾಡಿಗೆ ನೀಡಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಟಿಸುವ ಮುಖ್ಯ ರಸ್ತೆಗಳನ್ನು ನಿರ್ಮಿಸಬೇಕು ಎಂದರು.

    ನಗರದಲ್ಲಿ ನೀರು ಸರಬರಾಜು ಮಾಡುವಲ್ಲಿ ಸೂಕ್ತ ಕ್ರಮ ಕೈಗೊಂಡು, ಮೀಟರಗಳು ಗಾಳಿಯಿಂದ ತಿರುಗುತ್ತಿದ್ದು ಜನರಿಗೆ ಹೆಚ್ಚಿನ ಶುಲ್ಕ ಬರುತ್ತಿದ್ದು, ಮೀಟರಗಳನ್ನು ಸರಿಪಡಿಸಬೇಕು. ಮುಂದೆ ಗೋಕಾಕ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಯೋಗಿಕೋಳ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಡ್ಯಾಂನ ಪಕ್ಕದಲ್ಲಿ ಪಿಲ್ಟರ ಹೌಸ ನಿರ್ಮಿಸಲು ಅರಣ್ಯ ಇಲಾಖೆಯ ಜಾಗೆ ಗುರುತಿಸಿ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಇರುವ ಹಳ್ಳಗಳನ್ನು ಗುರುತಿಸಿ ಸ್ವಚ್ಛ ಮಾಡಬೇಕು.  ನಗರಸಭೆ ಅಧಿಕಾರಿ ಗಣಾಚಾರಿ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡ ಸಚಿವರು ಮನೆಗಳ ಜೆ.ಪಿ.ಎಸ್. ಮಾಡವಲ್ಲಿ ಎಡವಟ್ಟು ಮಾಡಿದ್ದನ್ನು ಸರಿಪಡಿಸಿ ಸರಕಾರದಿಂದ ಬೇಗನೆ ಮನೆ ಕಟ್ಟಲು ಹಣ ಬರುವಂತೆ ಸಚಿವರು ಗಣಾಚಾರಿಗೆ ತೀವ್ರ ತರಾಟೆಗೆ ತಗೆದುಕೊಂಡರು.

    ನಗರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಸಲುವಾಗಿ ಜನದಟ್ಟಣೆ ನಿಯಂತ್ರಿಸಲು ನಗರದ ಹೊರಬಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಿ , ಇಗಿರುವ ಬಸ ನಿಲ್ದಾಣವನ್ನು ಸಿಟಿ ಬಸ್ ನಿಲ್ದಾಣ ಮಾಡಬೇಕು. ಅಲ್ಲಿಯವರೆಗೆ ತಾತ್ಕಾಲಿಕ ಜಾಗವನ್ನು ಗುರುತಿಸಿ ಎಕ್ಸಪ್ರೆಸ್ ವಾಹನಗಳು ನಗರದಲ್ಲಿ ಬಾರದಂತೆ ನೋಡಿಕೊಳ್ಳಿ ಎಂದು ಕೆಎಸ್ ಆರ್ ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

    ನಗರೋತ್ಥಾನ ಅಡಿಯಲ್ಲಿ ಕಾಮಗಾರಿ ಮತ್ತು ನೀರು ಸರಬರಾಜು ಮಾಡಬೇಕು. ಮಾಸ್ಟರ್ ಪ್ಲ್ಯಾನ್ ಬಣಗಾರಗಲ್ಲಿ , ಕಿಲ್ಲಾಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 15 ಹಣಕಾಸು ಯೋಜನೆಯಲ್ಲಿ ಪ್ರಸ್ತುತ 5 ಕಾಮಗಾರಿಗಳು ಪ್ರಗತಿಯಲ್ಲಿದ್ದು ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಸಭೆಯಲ್ಲಿ ಗೋಕಾಕ ತಹಶೀಲ್ದಾರ್ ಕೆ.ಮಂಜುನಾಥ್ , ಮೂಡಲಗಿ ತಹಶೀಲ್ದಾರ್ , ಪ್ರಶಾಂತ್ ಚನ್ನಗೊಂಡ, ಗೋಕಾಕ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ , ಮೂಡಲಗಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚನ್ನನವರ ಉಪಸ್ಥಿತರಿದ್ದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು

    February 23, 2026

    ನಟ ದರ್ಶನ್‌ ಗೆ ಹೈಕೋರ್ಟ್‌ನಿಂದ ಸಣ್ಣ ರಿಲೀಫ್; ಗನ್ ಲೈಸೆನ್ಸ್ ಅಮಾನತಿಗೆ ತಡೆ

    February 23, 2026

    ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    February 23, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಆಟವಾಡುತ್ತಾ ಲೂಡೋ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು

    February 23, 2026

    ಮಂಗಳೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಲೂಡೋ ಕಾಯಿನ್ (ದಾಳ) ನುಂಗಿದ ಪರಿಣಾಮ ಎಂಟು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ…

    ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

    February 23, 2026

    ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು

    February 23, 2026

    ಹಾಸನದಲ್ಲಿ ಭೀಕರ ಅಪಘಾತ: ಬುಲೆಟ್‌ ನಿಂದ ಬಿದ್ದು 23 ವರ್ಷದ ಯುವತಿ ಸಾವು, ಮತ್ತೊಬ್ಬಳು ಗಂಭೀರ

    February 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.