nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವರಾತ್ರಿ

    October 16, 2026

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ

    October 16, 2026
    Facebook Twitter Instagram
    ಟ್ರೆಂಡಿಂಗ್
    • ನವರಾತ್ರಿ
    • ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ
    • ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ
    • ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?
    • ತುಮಕೂರು: ಅ.17ರಂದು ದಸರಾ ಕವಿಗೋಷ್ಠಿ
    • ಮುಜರಾಯಿ ದೇವಾಲಯಗಳ ಹಣ ದಸರಾಗೆ ಬೇಡ: ದಾಖಲೆ ಪ್ರದರ್ಶಿಸಿ ಒತ್ತಾಯಿಸಿದ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್
    • ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ – ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೇತೃತ್ವದಲ್ಲಿ ಪರಿಶೀಲನಾ ಸಭೆ
    • ಕೇದಿಗೇಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ: ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಂಗಳೂರಿನಲ್ಲಿವೆ 31,211 ರಸ್ತೆ ಗುಂಡಿ: ಗುಂಡಿ ಮುಚ್ಚಲು ಬಿಬಿಎಂಪಿ ಆದೇಶ
    Uncategorized November 6, 2022

    ಬೆಂಗಳೂರಿನಲ್ಲಿವೆ 31,211 ರಸ್ತೆ ಗುಂಡಿ: ಗುಂಡಿ ಮುಚ್ಚಲು ಬಿಬಿಎಂಪಿ ಆದೇಶ

    By adminNovember 6, 2022No Comments2 Mins Read
    road

    ಬೆಂಗಳೂರಿನಲ್ಲಿ ರಸ್ತೆ ಗುಂಡಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ನಗರದಲ್ಲಿನ 31 ಸಾವಿರ ಗುಂಡಿಗಳನ್ನು ಕೂಡಲೇ ಮುಚ್ಚಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ರಾಕೇಶ್ ಸಿಂಗ್ ಎಚ್ಚರಿಸಿದ್ದಾರೆ.

    ಬೆಂಗಳೂರಿನ ರಸ್ತೆ ಗುಂಡಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಶನಿವಾರ ದಿಢೀರ್‌ ಸಭೆ ನಡೆಸಿ ರಸ್ತೆ ಗುಂಡಿ ಮುಚ್ಚುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ವಲಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಗುರುವಾರ ಮಲ್ಲೇಶ್ವರದಲ್ಲಿ ದಂಪತಿ ರಸ್ತೆ ಗುಂಡಿ ಮುಚ್ಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದು ಮತ್ತು ರಸ್ತೆ ಗುಂಡಿಯಿಂದ ಸಂಭವಿಸುತ್ತಿರುವ ಸಾವು-ನೋವು ಕುರಿತು ನಿರಂತರವಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರನ್ನು ಕರೆಸಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಶುಕ್ರವಾರ ವಿಕಾಸಸೌಧದಲ್ಲಿ ಬಿಬಿಎಂಪಿಯ 8 ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಎಂಜಿನಿಯರ್‌ಗಳ ಸಭೆ ನಡೆಸಿ ಶನಿವಾರ ಮಧ್ಯಾಹ್ನ 12ರ ಒಳಗಾಗಿ ಕನಿಷ್ಠ ಪಕ್ಷ ಮುಖ್ಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಬೇಕು ಎಂದು ಗಡುವು ನೀಡಿದ್ದಾರೆ. ಅಲ್ಲದೇ ವಲಯ ಆಯುಕ್ತರು ಶುಕ್ರವಾರ ರಾತ್ರಿ 8ರಿಂದ ಆಯಾ ವಲಯ ಕಚೇರಿಯಲ್ಲಿ ಉಪಸ್ಥಿತರಿದ್ದು, ಎಂಜಿನಿಯರ್‌ಗಳೊಂದಿಗೆ ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿದರೆ ವಲಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಲಿದೆ ಎಂದು ರಾಕೇಶ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನ ಐಟಿ-ಬಿಟಿ ವಲಯದಲ್ಲೂ ರಸ್ತೆಗಳು ನೆಟ್ಟಗಿಲ್ಲ..!

    ಮೊದಲ ಹಂತದಲ್ಲಿ ಬಿಬಿಎಂಪಿಯ ವ್ಯಾಪ್ತಿಯ 1,300 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದರೊಂದಿಗೆ ರಸ್ತೆಯ ಅಕ್ಕ-ಪಕ್ಕದ ಮಳೆ ನೀರು ಕಾಲುವೆಯ ಹೂಳು ತೆಗೆಯಬೇಕು. ಜತೆಗೆ, ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿಡಬೇಕೆಂದು ನಿರ್ದೇಶಿಸಿದ್ದಾರೆ.

    ರಸ್ತೆ ಗುಂಡಿಗಳ ಸಂಖ್ಯೆ 31 ಸಾವಿರಕ್ಕೇರಿಕೆ!

    ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಒಂದು ವಾರದ ಅಂತರದಲ್ಲಿ ಸುಮರು 5 ಸಾವಿರಕ್ಕೂ ಅಧಿಕ ಹೊಸ ಗುಂಡಿ ಪತ್ತೆಯಾಗುವ ಮೂಲಕ ಒಟ್ಟು ಗುಂಡಿಗಳ ಸಂಖ್ಯೆ 31 ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ನವೆಂಬರ್ 27ಕ್ಕೆ 25 ಸಾವಿರಕ್ಕೂ ಅಧಿಕ ಗುಂಡಿಗಳು ಪತ್ತೆಯಾ ಗಿದ್ದವು. ನವೆಂಬರ್ 4ರ ವೇಳೆಗೆ 31 ಸಾವಿರಕ್ಕೆ ಏರಿಕೆಯಾಗಿದೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    Comments are closed.

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ನವರಾತ್ರಿ

    October 16, 2026

    ವಿ.ಎಂ.ಎಸ್.ಗೋಪಿ ಮೈಸೂರು ದಸರಾ ಎಷ್ಟೊಂದು ಸುಂದರ ನವರಾತ್ರಿ ಉತ್ಸವ ಹಬ್ಬದ ಸಡಗರ ಎಲ್ಲೆಲ್ಲೂ ಸಂಭ್ರಮ ನವ ಅವತಾರಗಳು ಶೈಲಪುತ್ರಿ ದುರ್ಗೆ…

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ

    October 16, 2026

    ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?

    October 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.