ಹೆಚ್.ಡಿ.ಕೋಟೆ: ನಿರಂತರವಾಗಿ ತಾಲೂಕಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ದಿನನಿತ್ಯ ಪತ್ರಿಕೆ ವಿತರಿಸಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಜರ್ಕಿನ್ ವಿತರಿಸಲಾಗಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು ತಿಳಿಸಿದರು.
ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸದಸ್ಯರುಗಳಿಗೆ ಜರ್ಕಿನ್ ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಅತಿ ಹೆಚ್ಚಾಗಿ ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪತ್ರಕರ್ತರು ದಿನನಿತ್ಯ ಪತ್ರಿಕೆ ವಿತರಿಸಲು ಕಷ್ಟಕರವಾಗುತ್ತಿತ್ತು ಹಾಗೂ ಕೆಲವು ಸಂದರ್ಭದಲ್ಲಿ ಸದಸ್ಯರು ಅನಾರೋಗ್ಯಕ್ಕೆ ಈಡಾಗುತ್ತಿದ್ದರು ಆದ್ದರಿಂದ ಅದನ್ನು ಮನಗೊಂಡ ಸದಸ್ಯರುಗಳಿಗೆ ಜರ್ಕಿನ್ ಗಳನ್ನು ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಆರ್. ನಾಗರಾಮ, ಸಹಕಾರ್ಯದರ್ಶಿ ದೊಡ್ಡಸಿದ್ದು, ಖಜಾಂಚಿ ಮಂಜು ಕೋಟೆ, ನಿರ್ದೇಶಕರುಗಳಾದ ಹಂಪಾಪುರ ನಾಗೇಶ್, ಪುಟ್ಟರಾಜು, ಜಿ. ರವಿಕುಮಾರ್, ರಂಗರಾಜು, ರವಿಕುಮಾರ್ ಆರಾದ್ಯ, ಸದಸ್ಯರುಗಳಾದ ಕನ್ನಡ ಪ್ರಮೋದ್, ಶ್ರೀನಿಧಿ, ಬಸವರಾಜು, ನಿಂಗಣ್ಣ ಕೋಟೆ, ವಾಸುಕಿ ನಾಗೇಶ್, ಸುರೇಶ್, ಆನಂದ್, ರಘು, ದಾಸೇಗೌಡ, ಚಿಕ್ಕಣ್ಣೆಗೌಡ, ಶರವಣ, ಚಂದ್ರು, ಪುರುಷೋತ್ತಮ್, ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


