ಹೆಚ್.ಡಿ.ಕೋಟೆ: ತಾಲ್ಲೂಕಿನ ನೆಮ್ಮನ ಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ಮತ್ತು ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಿ.ಮಟಕೆರೆ ಸಹಯೋಗದೊಂದಿಗೆ, ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಾಗೂ ಬಾಯಿ ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ , ದಂತ ತಜ್ಞ ವೈದ್ಯರಾದ ಸಮೀವುಲ್ಲಾ ಷರೀಫ್ ರವರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚಂದ್ರ ಶೇಖರ್ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ನಂತರ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಾರ್ವಜನಿಕ ಆಸ್ಪತ್ರೆ ದಂತ ತಜ್ಞ ರಾದ ಡಾ.ಸಮೀ ವುಲ್ಲಾ ಶರೀಫ್ ರವರು ಮಾತನಾಡಿ, ಇದರ ಮುಖ್ಯ ಉದ್ದೇಶ ಜನರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬಾಯಿ ಆರೋಗ್ಯದ ಮಹತ್ವವನ್ನು ತಿಳಿಸಿಕೊಡುವುದು ಎಂದರು.
ನಮ್ಮ ಬಾಯಿ ನಮ್ಮ ದೈಹಿಕ ಆರೋಗ್ಯಕ್ಕೆ ಕನ್ನಡಿ ಇದ್ದ ಹಾಗೆ ಏಕೆಂದರೆ ಅನೇಕ ಕಾಯಿಲೆಗಳ ರೋಗಲಕ್ಷಣಗಳು ಮೊದಲಿಗೆ ಬಾಯಲ್ಲಿ ಕಾಣಿಸಿಕೊಳ್ಳುತ್ತವೆ, ಒಬ್ಬ ವ್ಯಕ್ತಿಯ ಬಾಯಿಯನ್ನು ಪರೀಕ್ಷಿಸಿ ಅವನು ಎಷ್ಟು ಆರೋಗ್ಯಕರವಾಗಿದ್ದಾನೆಂದು ಗುರುತಿಸಬಹುದು, ನಾವು ಸೇವಿಸುವ ಆಹಾರವು ಎಷ್ಟೇ ಶುಚಿಯಾಗಿದ್ದು ಎಷ್ಟೇ ಪೌಷ್ಟಿಕಾಂಶದಿಂದ ಕೂಡಿದರು, ನಮ್ಮ ಬಾಯಿ ಆರೋಗ್ಯಕರವಾಗಿಲ್ಲದಿದ್ದರೆ ನಮ್ಮ ಬಾಯಿಯಲ್ಲಿನ ಕ್ರಿಮಿ ಕೀಟಗಳೊಂದಿಗೆ ಆಹಾರ ನಮ್ಮ ದೇಹಕ್ಕೆ ಸೇರಿ ನಮಗೆ ಅನೇಕ ಕಾಯಿಲೆಗಳು ಬರುವ ಸಂಭವವಿರುತ್ತದೆ, ನಾವು ಪ್ರತಿನಿತ್ಯ ಎರಡು ಬಾರಿ ಹಲ್ಲನ್ನು ಸ್ವಚ್ಛಗೊಳಿಸಬೇಕು . ಬಿಡಿ, ಸಿಗರೇಟ್, ತಂಬಾಕು, ಸೇವನೆಯಿಂದ ದೂರವಿರಬೇಕು, ಇದರಿಂದ ಬಾಯಿ ಕ್ಯಾನ್ಸರ್ ಬರುವ ಸಂಭಾವನೆ ಬಹಳ ಹೆಚ್ಚು ದುಶ್ಚಟಗಳಿಂದ ದೂರವಿದ್ದು ಬಾಯಿ ಆರೋಗ್ಯ ಕಾಪಾಡಿಕೊಳ್ಳಬೇಕು.
ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ವಿಶ್ವಬಾಯಿ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಘೋಷವಾಕ್ಯ ಬಿಡುಗಡೆ ಮಾಡುತ್ತದೆ. 2024ನೇ ವರ್ಷದ ಘೋಷ ವಾಕ್ಯ “Happy Mooth Is Happy Body ( ಸಂತೋಷದ ಬಾಯಿ, ಸಂತೋಷದ ದೇಹ) ಇದರ ಅರ್ಥ ಏನೆಂದರೆಬಾಯಿ ಆರೋಗ್ಯದಿಂದ ಇದ್ದರೆ ಸಂತೋಷ ವಾಗಿರುತ್ತದೆ ,ಬಾಯಿ ಸಂತೋಷ ವಾಗಿದ್ದರೆ, ದೇಹವು ಸಹ ಸಂತೋಷವಾಗಿರುತ್ತದೆ , ಆದುದರಿಂದ ನಾವೆಲ್ಲರೂ ಬಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬಾಯಿ ಆರೋಗ್ಯ ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ನಮ್ಮ ದೈಹಿಕ ಆರೋಗ್ಯವನ್ನು ಸಹ ಉತ್ತಮವಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚಂದ್ರ ಶೇಖರ್ ರವರು ಹಲ್ಲಿನ ನೋವು ಮತ್ತು ದಂತ ಭಾಗ್ಯದ ಬಗ್ಗೆ ವಿವರವಾಗಿ ತಿಳಿಸಿದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ , ಎಲ್ಲರೂ ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತವನ್ನು ಸ್ವಚ್ಛಗೊಳಿಸಬೇಕು, ದಿನಕ್ಕೆರಡು ಬಾರಿ ದಂತವನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು. ಈ ಶಿಬಿರವನ್ನು ನಿಮಗಾಗಿ ಆಯೋಜನೆ ಮಾಡಲಾಗಿದೆ, ಆದ್ದರಿಂದ ಹೆಚ್ಚಿನ ಜನರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚಂದ್ರಶೇಖರ್ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ರವಿರಾಜ್ , VMH ಮೇಲ್ವಿಚಾರಕರಾದ ವೆಂಕಟಸ್ವಾಮಿ , ಆರೋಗ್ಯ ಸುರಕ್ಷಾಧಿಕಾರಿ, ಅನಿತಾ ಆಶಾ ಕಾರ್ಯಕರ್ತೆಯರಾದ ಜ್ಯೋತಿ , VMH ಮಹೇಶ್ ಸಾರ್ವಜನಿಕರು ಇನ್ನಿತರರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx