ತುಮಕೂರು: ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾವಿನ ಕಟ್ಟೆ ಕೆರೆಯ ಅಂಗಳದಲ್ಲಿ 42 ಕುಟುಂಬಗಳನ್ನು ಸಾತೇನಹಳ್ಳಿಗೆ ಸ್ಥಳಾಂತರ ಗೊಳಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡು ಕೆರೆ ಅಂಗಳದಲ್ಲಿ ನರಕ ಯಾತನೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ನವಚೇತನ ನೀಡಿದ ತಹಶೀಲ್ದಾರ್ ಆರತಿ ಮತ್ತು ಪಟ್ಟಣ ಪಂಚಾಯಿತಿ ಚೀಪ್ ಆಫೀಸರ್ ಮಂಜುಳಾ ದೇವಿ ಅವರ ಕಾರ್ಯವೈಖರಿಗೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇಂದು ಬಾಬು ಜಗಜೀವನ್ ರಾಮ್ ಭವನದಲ್ಲಿರುವ ನಿರಾಶ್ರಿತರನ್ನು ಮತ್ತು ಪುನರ್ವಸತಿ ಸೌಕರ್ಯ ಕಲ್ಪಿಸಿದ ಸಾತೇನಹಳ್ಳಿಗೆ ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಸದಸ್ಯರು ಭೇಟಿ ನೀಡಿದರು.
ಇಲ್ಲಿನ 42 ಕುಟುಂಬಗಳ ಸದಸ್ಯರೊಂದಿಗೆ ಚರ್ಚಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಸದಸ್ಯರು ಮುಖ್ಯ ಪಾತ್ರ ವಹಿಸಿದ್ದರು.
ಈ ಸಂಘಟನೆಗಳ ನಿರಂತರ ಹೋರಾಟದಿಂದಾಗಿ ಕಳೆದ ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕರಣ ಸುಖಾಂತ್ಯವಾಗಿದೆ. ತಾಲೂಕು ಆಡಳಿತದ ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಮಾಡುತ್ತಿರುವುದರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಹಂದಿ ಜೋಗಿ ಕುಟುಂಬದ ಸದಸ್ಯರು ಮಾತನಾಡಿ, ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಗೆ ಧನ್ಯವಾದಗಳನ್ನು ತಿಳಿಸಿದರಲ್ಲದೇ, ಈವರೆಗೆ ನಮ್ಮ ಹೋರಾಟವನ್ನು ಯಾರೂ ಬೆಂಬಲಿಸಲಿಲ್ಲ, ನಿಮ್ಮ ಹೋರಾಟದ ಫಲವಾಗಿ ಈ ದಿನ ನಮಗೆ ಸರ್ಕಾರದ ಸೌಲಭ್ಯ ಸಿಗಲಿದೆ ಎಂದು ಆನಂದ ಭಾಷ್ಪ ಸುರಿಸಿದರು.
ಈ ಸಂದರ್ಭದಲ್ಲಿ ಕಾಳಜಿ ಫೌಂಡೇಶನ್ ನ ಅಧ್ಯಕ್ಷರಾದ ನಟರಾಜ್ ಜಿ.ಎಲ್., ಶಿವಕುಮಾರ್ ಮೇಷ್ಟ್ರುಮನೆ, ಗಣೇಶ್ ಮಾರನಹಳ್ಳಿ , ಪದ್ಮನಾಭನ್, ಮೋಹನ್ ಕುಮಾರ್, ಅಂಜನ್ ಮತ್ತು ನೈಜ ಹೋರಾಟಗಾರರ ವೇದಿಕೆಯ ಹೆಚ್.ಎಂ.ವೆಂಕಟೇಶ್ , ನರಸಿಂಹಮೂರ್ತಿ ಜಿ.ಎನ್., ಮಲ್ಲಿಕಾರ್ಜುನ ರಾಜು, ಡೆಲ್ಲಿ ಬಾಬು, ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q