nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು

    November 12, 2025

    ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ

    November 12, 2025

    ಕೂಲಿ ಕೊಡದೇ ಗಾರ್ಮೆಂಟ್ಸ್‌ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

    November 12, 2025
    Facebook Twitter Instagram
    ಟ್ರೆಂಡಿಂಗ್
    • ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
    • ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
    • ಕೂಲಿ ಕೊಡದೇ ಗಾರ್ಮೆಂಟ್ಸ್‌ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
    • ಸರಗೂರು |  ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
    • ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
    • ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
    • ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
    • ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೈತರ ಸಾಲದ ಮೇಲೆ ಜಪ್ತಿ/ ಹರಾಜು ತಡೆಗೆ ಕಾನೂನು ರಚನೆ: ಸಿಎಂ ಬೊಮ್ಮಾಯಿ ಘೋಷಣೆ
    ರಾಜ್ಯ ಸುದ್ದಿ November 6, 2022

    ರೈತರ ಸಾಲದ ಮೇಲೆ ಜಪ್ತಿ/ ಹರಾಜು ತಡೆಗೆ ಕಾನೂನು ರಚನೆ: ಸಿಎಂ ಬೊಮ್ಮಾಯಿ ಘೋಷಣೆ

    By adminNovember 6, 2022No Comments4 Mins Read

    ರೈತರ ಸಾಲದ ಮೇಲೆ ಜಪ್ತಿ ಆಗಲಿ ಹರಾಜಾಗಲಿ ಮಾಡಬಾರದು ಎಂಬ ಕಾನೂನನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ರೈತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ರೈತರ ಸಾಲ ಮಾರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು, ಸಹಾಯ ಮಾಡಬೇಕೇ ಹೊರತಾಗಿ ಯಾವುದೇ ಜಪ್ತಿ/ ಹರಾಜು ಮಾಡುವುದು ಮಾಡಬಾರದೆಂದು ಸಹಕಾರ ಹಾಗೂ ಇತರೆ ಇಲಾಖೆಗಳಿಗೆ ಸೂಚನೆ ನೀಡಿದ್ದು, ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ ಎಂದರು.


    Provided by
    Provided by

    ದುಡಿಯುವ ವರ್ಗಕ್ಕೆ ಬಲ

    ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಜಾರಿಯಾಗಿದೆ. 10 ಲಕ್ಷ ರೈತ ಕುಟುಂಬಗಳಿಗೆ ಈ ವರ್ಷ ಮುಟ್ಟಿದೆ. ರೈತ ಕೂಲಿಕಾರರ ಮಕ್ಕಳು, ನೇಕಾರರು, ಮೀನುಗಾರರು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದೆ. ದುಡಿಮೆ ಮಾಡುವವರಿಗೆ ಶಕ್ತಿ ತುಂಬುತ್ತಿದ್ದೇವೆ. ಆರ್ಥಿಕ ಬೆಳವಣಿಗೆಗೆ ಕಾರಣರಾಗುವವರು ಕೆಳಹಂತದ ಜನ. ದುಡಿಯುವವರಿಂದ ಮಾತ್ರ ಇದು ಸಾಧ್ಯ. ಅವರು ಆರ್ಥಿಕವಾಗಿ ಸಬಲರಾದರೆ ದೇಶ ಸಬಲವಾಗುತ್ತದೆ. ಕೃಷಿಯಲ್ಲಿ ಶೇ 60 ರಷ್ಟು ಜನ ಅವಲಂಬಿತರಾಗಿದ್ದಾರೆ. ಅವರು ಆರ್ಥಿಕವಾಗಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಕೃಷಿ ವಲಯದಲ್ಲಿ ಶೇ 1 ರಷ್ಟು ಬೆಳವಣಿಗೆಯಾದರೆ, ನಾವು ಕೈಗಾರಿಕೆಯಲ್ಲಿ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಬೆಳವಣಿಗೆಯಾಗುತ್ತದೆ ಎಂದರು.

    ಕೃಷಿ ವಿವಿಗಳು ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡಬೇಕು

    ಆರ್ಥಿಕ ಅಭಿವೃದ್ಧಿ ಕೃಷಿ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿದ್ಯಾಲಯಗಳು ಆಗ್ರೋ- ಎಕನಾಮಿಕ್ಸ್ ಕುರಿತಾಗಿ ಸಂಶೋಧನೆಗಳನ್ನು ಕೈಗೊಂಡು ಸರ್ಕಾರಕ್ಕೆ ಸಲಹೆ ನೀಡಬೇಕು. ಕೃಷಿ ವಿವಿಗಳು ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡಬೇಕು. ಹೊಸ ಸಂಶೋಧನೆ, ವಿಧಾನಗಳ ಬಗ್ಗೆ ತಿಳಿಸಬೇಕು. ಅದಕ್ಕಾಗಿಯೇ ಸೆಕಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆಯಾಗಿದೆ. ಇದಕ್ಕೆ ಕೊಡುಗೆ ನೀಡಬೇಕು. ಸರ್ಕಾರಕ್ಕೆ ಮಾರ್ಗದರ್ಶನವಾಗುತ್ತದೆ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಚಿಂತಿಸಬೇಕು. ಕೃಷಿ ಮೇಳದ ಜೊತೆಗೆ ಸಮನ್ವಯ ಸಾಧಿಸುವ ಹತ್ತು ಹಲವಾರು ಕಾರ್ಯಕ್ರಮಗಳು ಆಗುತ್ತಿರುವುದು ಶ್ಲಾಘನೀಯ. ಬೆಂಗಳೂರು ಹಾಗೂ ಧಾರವಾಡ ವಿವಿಗಳು 58 ವರ್ಷಗಳಿಂದ ಅತ್ಯುತ್ತಮ ಕೆಲಸ ಮಾಡಿಕೊಂಡು ಬಂದಿವೆ. ನೈಸರ್ಗಿಕ ಕೃಷಿಯನ್ನು ತಲಾ ಒಂದು ಸಾವಿರ ಎಕರೆಯಲ್ಲಿ ಅಭಿವೃದ್ಧಿಪಡಿಸಲು ಗುರಿಯನ್ನು ನಿಗದಿಮಾಡಿದೆ. ಅಲ್ಪ ಬಂಡವಾಳದಿಂದ ಹೆಚ್ಚಿನ ಉತ್ಪಾದನೆ ಮಾಡುವುದು, ಯಾವುದೇ ರಾಸಾಯನಿಕ ಬಳಕೆ ಇಲ್ಲದೇ ಅಧ್ಯಯನ ಮಾಡಿ ವರದಿ ನೀಡಲು ಸೂಚಿಸಿದೆ. ನವೆಂಬರ್ 1 ರಿಂದ ರೈತರಿಗಾಗಿ ಯಶಸ್ವಿನಿ ಯೋಜನೆಯನ್ನು ಪುನ: ಪ್ರಾರಂಭಿಸಲಾಗಿದೆ. ರೈತ ಸಹಾಯಧನ ಯೋಜನೆಯಡಿ ಯೋಜನೆಯಲ್ಲಿ ಡೀಸಲ್ ಸಬ್ಸಿಡಿ, 2023 ರ ಜನರಿಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಿದೆ ಎಂದರು.

    ರೈತ ಸ್ನೇಹಿ ಕಾರ್ಯಕ್ರಮಗಳ ಹೆಚ್ಚಳ

    ಕರ್ನಾಟಕ ಸರ್ಕಾರ ರೈತ ಸ್ನೇಹಿ ಕಾರ್ಯಕ್ರಮಗಳನ್ನು ಹೆಚ್ಚು ಮಾಡಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ 10 ಲಕ್ಷ ರೈತರಿಗೆ ಹೆಚ್ಚಿನ ಸಾಲವನ್ನು ನೀಡುವುದರಿಂದ ಹಿಡಿದು, ಅನೇಕ ಕಾರ್ಯಕ್ರಮಗಳನು ರೂಪಿಸಿದೆ. ರೈತರು ಕೂಡ ವೈಜ್ಞಾನಿಕವಾಗಿ ಚಿಂತಿಸುವುದು, ಹೊಸ ತಳಿಗಳನ್ನು ಪ್ರಯೋಗ ಮಾಡುವುದು, ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಸಮಗ್ರ ಕೃಷಿ ಕೈಗೊಳ್ಳಲು ಮುಂದಾಗಬೇಕು. ಹಾಗೂ ಕೃಷಿ ವಿವಿ ಮಾರ್ಗದರ್ಶಕವಾಗಬೇಕು. ಸರ್ಕಾರ ರೈತ ಮತ್ತು ರೈತರ ಮಕ್ಕಳ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ತಾಯಿಯ ಗರ್ಭದಿಂದ ಭೂತಾಯಿಯ ಗರ್ಭದವರೆಗಿನ ಬದುಕು.

    ಮಣ್ಣಿನಲ್ಲಿರುವ ವಿಸ್ಮಯಕಾರಿ, ಅಗಾಧ ಶಕ್ತಿ ಇದ್ದು, ಇದರೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಿದ್ದೇವೆ. ಬೇರ್ಯಾವ ಕ್ಷೇತ್ರದಲ್ಲಿಯೂ ಈ ರೀತಿ ಮಾಡಲು ಸಾಧ್ಯವಿಲ್ಲ. ಕಾರ್ಖಾನೆಗಳಲ್ಲಿ ನೂರು ಭಾಗಗಳನ್ನು ಸೇರಿಸಿ ಒಂದು ವಸ್ತು ತಯಾರಾಗುತ್ತದೆ. ಆದರೆ ಭೂಮಿ ಒಂದು ಕಾಳು ಹಾಕಿದರೆ ನೂರು ಕಾಳು ಭೂಮಿ ತಾಯಿ ನೀಡುತ್ತಾಳೆ. ಭೂಮಿ ತಾಯಿಯನ್ನು ನಮ್ಮ ಸ್ವಂತ ತಾಯಿಯ ರೀತಿ ನೋಡಿಕೊಳ್ಳಬೇಕು. ತಾಯಿಯ ಗರ್ಭದಿಂದ ಭೂತಾಯಿಯ ಗರ್ಭದವರೆಗೆ ನಮ್ಮ ಬದುಕು. ಇದರ ಅರಿವಿಲ್ಲದೇ ಕೃಷಿ ಅನಿವಾರ್ಯ ಎಂಬಂತೆ ಮಾಡಿದರೆ ಖಂಡಿತವಾಗಿ ದೇಶಕ್ಕೆ ಹಾಗೂ ನಮಗೆ ಒಳಿತಾಗುವುದಿಲ್ಲ. ಭಾವನಾತ್ಮಾಕ ಸಂಬಂಧಗಳನ್ನು ಇಟ್ಟುಕೊಳ್ಳಬೆಕಾಗುತ್ತದೆ. ಭಾವನೆಗಳಿದ್ದಲ್ಲಿ ಕ್ರಿಯಾತ್ಮಕ ಶಕ್ತಿ ಇರುತ್ತದೆ ಎಂದರು.

    ಕೃಷಿ ನಮ್ಮ ನೆಲೆದ ಸಂಸ್ಕೃತಿ

    ಭಾವನಾತ್ಮಕ ಸಂಬಂಧವಿರುವುದರಿಂದ ವಿದ್ಯೆ ಕಲಿಸಲು ತಂದೆತಾಯಿಗಳು ತಮ್ಮ ಮಕ್ಕಳಿಗೆ ಹೇಗೆ ಶ್ರಮಿಸುತ್ತಾರೋ ಅದೇ ರೀತಿ ಕೃಷಿ, ರೈತರು, ಇಲಾಖೆ, ಪ್ರಾಧ್ಯಾಪಕರು, ವ್ಯಾಪಾರಸ್ಥರು ಇದ್ದಾರೆ. ಇದೊಂದು ದೊಡ್ಡ ಸಮುದಾಯ. ಬೀಜ ತರಾರಿಸುವುದರಿಮದ ಹಿಡಿದು ಉತ್ಪಾದನೆ, ಸಂಸ್ಕರಣೆ, ಮಾರಾಟದವರೆಗೆ ದೊಡ್ಡ ಸಮೂಹವಿದೆ. ಆದ್ದರಿಂದ ಕೃಷಿ ನಮ್ಮ ನೆಲೆದ ಸಂಸ್ಕೃತಿ. ಆದ್ದರಿಂದ ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಸರ್ಕಾರ ಮತ್ತು ಸಮಾಜ ಮಾಡಬೇಕಾಗುತ್ತದೆ. 130 ಕೋಟಿ ಜನಸಂಖ್ಯೆಗೆ ಆಹಾರ ನೀಡುವ ಮಟ್ಟಿಗೆ ದೇಶ ಸದೃಢವಾಗಲು ಕೃಷಿಕರ ಶ್ರಮ, ಸರ್ಕಾರದ ನೀತಿಗಳು ಕಾರಣವಾಗಿವೆ. ಆಹಾರದಲ್ಲಿ ಸ್ವಾವಲಂಬಿಯಾಗದ ದೇಶ ಸ್ವಾಭಿಮಾನಿಯಾಗಲು ಸಾಧ್ಯವಿಲ್ಲ. ಭಾರತ ಬಲಿಷ್ಠವಾಗಲು, ಸ್ವಾಭಿಮಾನಿಯಾಗಲು ರೈತರ ಬೆವರು, ಅವರು ನೀಡಿರುವ ಆಹಾರ ಭದ್ರತೆ ಕಾರಣ ಎಂದರು.

    ಸಮಗ್ರ ಕೃಷಿಯನ್ನು ಸಮರೋಪಾದಿಯಲ್ಲಿ ಜಾರಿಗೆ ತಂದು ದೊಡ್ಡ ಬದಲಾವಣೆಯನ್ನು ತರಬೇಕು.
    ಕೃಷಿ ಯೋಜನೆಗಳು ಕೃಷಿ ವಲಯಗಳಿಗೆ ಅನುಗುಣವಾಗಿ ಆಗಬೇಕು. ಸಮಗ್ರ ಕೃಷಿ ಪರಿಣಾಮಕಾರಿಯಾಗಿರುತ್ತದೆ. ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದ್ದ ಬೂಮಿಯಲ್ಲಿ ಇತರೆ ಕೃಷಿ ಆಧಾರಿತ ಚಟುವಟಿಕೆ ಮಾಡಿದರೆ ಕೃಷಿಯನ್ನು ಲಾಭದಾಯಕವಾಗಿಸಬಹುದು. 2-3 ಎಕರೆಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಿದೆ. ಇದನ್ನು ಪ್ರತಿ ರೈತನೂ ಮಾಡಿದಾಗ ರೈತರು ಅಭಿವೃದ್ಧಿಯಾಗಬಹುದು. ಸಮಗ್ರ ಕೃಷಿಯನ್ನು ಸಮರೋಪಾದಿಯಲ್ಲಿ ಜಾರಿಗೆ ತಂದು ದೊಡ್ಡ ಬದಲಾವಣೆಯನ್ನು ತರಬೇಕು ಎಂದರು.

    ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆಯಾಗಬೇಕು:

    ರೈತ ಉತ್ಪಾದಕ ಸಂಘಗಳು 8-10 ಕೋಟಿ ವಹಿವಾಟು ಮಾಡಿ ಲಾಭ ಮಾಡಿಕೊಂಡಿವೆ. ಮಧ್ಯವರ್ತಿಗಳಿಗೆ ಹೋಗುತ್ತಿದ್ದ ಹಣ, ಸಂಘಕ್ಕೇ ಉಳಿಯುತ್ತಿದೆ. ಅದಕ್ಕಾಗಿ ಮೀನುಗಾರಿಗೆ, ನೇಕಾರರ ಎಫ್.ಪಿ.ಒ ಗಳಿಗೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆಯಾಗಬೇಕು. ನಬಾರ್ಡ್ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಸ್ಕೇಲ್ ಆಫ್ ಬ್ಯಾಲೆನ್ಸ್ ಬದಲಾಗಬೇಕೆಂದು ಒತ್ತಾಯ ಮಾಡಲಾಗಿದೆ ಎಂದರು. ಶೇ 80 % ರೈತರು ಸಣ್ಣ ರೈತರಿದ್ದಾರೆ. ಅವರಿಗೆ 8-10 ಲಕ್ಷ ದೊರೆತರೆ ಅನುಕೂಲವಾಗುತ್ತದೆ ಎಂದರು.

    ಕೃಷಿಯ ವಿಚಾರದಲ್ಲಿ ರಾಜಕಾರಣವಾಗಬಾರದು:

    ಕೃಷಿ ಬೆಳೆದಿದೆ, ಆದರೆ ರೈತ ಬೆಳೆದಿಲ್ಲ. ಈ ಬಗ್ಗೆ ಸ್ಪಷ್ಟ ನೀತಿ ಅಗತ್ಯವಿದೆ. ಕೃಷಿ ಅನಿಶ್ಚಿತತೆಯ ಬದುಕು. ಮಳೆಯ ಮೇಲೆ ಅವನ ಬದುಕು ಅವಲಂಬಿತವಾಗಿದೆ. ಮಳೆ ಬಾರದಿದ್ದರೂ, ಅತಿಯಾದ ಮಳೆಯಾದರೂ ನಷ್ಟ. ಕೊಳವೆಬಾವಿ ಕೊರೆಸಿದರೆ ವಿದ್ಯುತ್ ಸಂಪರ್ಕ, ವಿದ್ಯುತ್ ಸಂಪರ್ಕ ದೊರೆತರೆ ಎಷ್ಟು ದಿನ ಕೊಳವೆಬಾವಿ ಇರುತ್ತದೋ ತಿಳಿಯದ ಸ್ಥಿತಿ. ಪ್ರತಿಯೊಂದು ಅನಿಶ್ಚಿತತೆಯಿಂದ ಕೂಡಿದೆ. ರೈತರ ಬದುಕಿಗೆ ನಿಶ್ಚಿತತೆ ಇದ್ದರೆ ಮಾತ್ರ ಉತ್ಪಾದನೆ ಸಾಧ್ಯ, ಬೆಲೆ ಸಿಗಲು ಸಾಧ್ಯ ಎಂದು ಅವರು ಹೇಳಿದರು.

    ಈ ಪ್ರಯೋಗವನ್ನು ಕರ್ನಟಕದಲ್ಲಿ ಮೊಟ್ಟಮೊದಲಿಗೆ ಮಾಡಿದರು ಕೃಷ್ಣ ಬೈರೇಗೌಡರ ತಂದೆ ಬೈರೇಗೌಡರು. ಈ ರಾಜ್ಯದ ಎಲ್ಲ ಭಾಗದಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಸಂಪೂರ್ಣವಾಗಿ ವ್ಯಾಖ್ಯಾನ ಮಾಡುವ ಶಕ್ತಿ ಅವರಲ್ಲಿತ್ತು. ಸಮಗ್ರ ಕೃಷಿ ನೀತಿ ವಿಧಾನ ಸಭೆಯಲ್ಲಿ ಮಂಡನೆಯಾದ ಸಂದರ್ಭದಲ್ಲಿ 3 ದಿನ ಸತತವಾಗಿ ಮಾತನಾಡಿ 4 ನೇ ದಿನ ತಮ್ಮ ಮಾತನ್ನು ಮುಕ್ತಾಯ ಮಾಡಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

    ಕೃಷಿಕರು, ಕೃಷಿಯ ವಿಚಾರದಲ್ಲಿ ರಾಜಕಾರಣವಾಗಬಾರದು. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಆದರೆ ಎಲ್ಲಾ ಪಕ್ಷಗಳೂ ರೈತನಿಗೆ ಸೇರಿವೆ. ಸರ್ಕಾರ ನಡೆಸುವವರು ಇದನ್ನು ಮನಗಂಡಾಗ ಮಾತ್ರ ನಿರಂತರವಾಗಿ ರೈತರ ಏಳಿಗೆಗೆಗಾಗಿ ಕಾರ್ಯಕ್ರಮಗಳು ಆಗುತ್ತವೆ. ಕೃಷಿಕನ್ನು ಉದ್ಧಾರ ಮಾಡಲು ಸಂಶೋಧನೆಯ ಫಲವೂ ಬೇಕು. ವಿಶ್ವವಿದ್ಯಾಲಯಗಳು ಆವರಣದಿಂದ ಹೊರಗೆ ಬಂದು ಪ್ರಯೋಗ ಮಾಡಬೇಕು ಎಂದರು.

    ಕೃಷಿ ಸಚಿವ ಬಿ.ಸಿ ಪಾಟೀಲ್, ಕಂದಾಯ ಸಚಿವ ಆರ್. ಅಶೋಕ್, ಶಾಸಕ ಕೃಷ್ಣ ಬೈರೇಗೌಡ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಎಸ್.ವಿ.ಸುರೇಶ್, ಹನುಮಂತಪ್ಪ ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ:  ಸಿಎಂ ಸಿದ್ದರಾಮಯ್ಯ

    November 8, 2025

    ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

    November 8, 2025

    ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

    November 8, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು

    November 12, 2025

    ಪಾವಗಡ: ಪಟ್ಟಣದ ಕಾಳಿದಾಸ ನಗರದಲ್ಲಿ ಸೋಮವಾರ ರಾತ್ರಿ ಮನೆಯ ಬೀಗ ಒಡೆದು, ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಓಬಳಮ್ಮ…

    ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ

    November 12, 2025

    ಕೂಲಿ ಕೊಡದೇ ಗಾರ್ಮೆಂಟ್ಸ್‌ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

    November 12, 2025

    ಸರಗೂರು |  ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ

    November 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.