ಬೀದರ್: ಜಿಲ್ಲೆಯ ಕಮಲನಗರ ತಾಲ್ಲೂಕಿನ ಹಂದಿಖೇರಾ ಗ್ರಾಮದಲ್ಲಿ ಏಪ್ರಿಲ್ 13ರಿಂದ 20ರವರೆಗೆ ಹರಿನಾಮ ಸಪ್ತಾಹ ಹಾಗೂ ಜಗದ್ಗುರು ತುಕೋಬರಾಯರ 365ನೇ ಮಹೋತ್ಸವ ನಡೆಯುತ್ತಿದೆ.
ಅಖಂಡ ಹರಿನಾಮ ಸಪ್ತಾಹ ಭಾಗವತ ಕಥಾ ಹಾಗೂ ವಿ.ಗುರುವರ್ಯ ದಾದಾಸಾಹೇಬ ಮಹಾರಾಜ ಪಂಢರಪುರಕರ್ ವಿ.ಗುರುವರ್ಯ ಬಾಲಕೃಷ್ಣ ಮಹಾರಾಜ್ ಖಡಕು ಉಂಬರೇಕರರವರ ಆಶೀರ್ವಾದದೊಂದಿಗೆ ಹಾಗೂ ಗುರುವರ್ಯ ಸಂಜಯ ಮಹಾರಾಜ್ ಖಡಕು ಉಂಬರೇಕರರವರ ಅಧ್ಯಕ್ಷತೆಯಲ್ಲಿ ಹಾಗೂ ಕಾಶಿನಾಥ ಮಹಾರಾಜ ಪಾಂಚಾಲ ಹಂದಿಕೇರಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಪ್ರತಿದಿನ ಸಂಜೆ 9 ರಿಂದ 11ರವರೆಗೆ ಕೀರ್ತನೆ ನಡೆಸಲಾಗುತ್ತದೆ. ವೈ. ಸಮಾರಂಭ ಗುರುವರ್ಯ ದಾದಾಸಾಹೇಬ್ ಮಹಾರಾಜ ಪಂಢರಪುರಕರ್ ವೈ.ಗುರುವರ್ಯ ಬಾಲಕೃಷ್ಣ ನಡೆಯಲಿದೆ. ಪಂಚಕ್ರೋಶಿಯಲ್ಲಿ ಭಜನಿ ಮಂಡಲದ ಈ ಕಾರ್ಯಕ್ರಮದ ಲಾಭವನ್ನು ಪಡೆದು ಕೊಳ್ಳುವಂತೆ ಹಂದಿಕೇರ ಗ್ರಾಮಸ್ಥರಿಗೆ ಅಮೂಲ ಬಿರಾದಾರ ಮನವಿ ಮಾಡಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW