ರಾಮನಗರ: ಹಾಸನದ ವಿಷಯದಲ್ಲಿ ನನ್ನ ಸ್ಟ್ಯಾಂಡ್ ಬದಲಾಗಲ್ಲ. ದೇವೇಗೌಡರು ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಹಾಸನ ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಹಾಸನ ಟಿಕೆಟ್ ಬಗ್ಗೆ ಹಲವಾರು ಚರ್ಚೆ ಆಗಿದೆ. ಈ ಬಗ್ಗೆ ಸುಗಮವಾಗಿ ತೀರ್ಮಾನ ಆಗುತ್ತದೆ. ದೇವೇಗೌಡರು ಇವತ್ತು ದೆಹಲಿಗೆ ಹೋಗಿದ್ದಾರೆ. ದೆಹಲಿಯಿಂದ ಬಂದ ಬಳಿಕ ಟಿಕೇಟ್ ತೀರ್ಮಾನ ಘೋಷಣೆ ಮಾಡುತ್ತಾರೆ. ದೇವೇಗೌಡರು ದೆಹಲಿಯಿದ ಬಂದ ಮೇಲೆ ಎಲ್ಲಾ ಗೊತ್ತಾಗಲಿದೆ ಎಂದ ಅವರು, ಟಿಕೆಟ್ ಸಿಗದಿದ್ದರೆ ಭವಾನಿ ರೇವಣ್ಣ ಪಕ್ಷೇತರ ಸ್ಪರ್ಧೆ ಕುರಿತು ಚರ್ಚೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


