ಹಾವೇರಿ: ಜಿಲ್ಲೆಯ ನಾಗೇಂದ್ರಮಟ್ಟಿ ಬಡಾವಣೆಯಲ್ಲಿ ಕಳ್ಳರು ಸರಣಿ ಕಳ್ಳತನ ಮಾಡುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ್ದಾರೆ. ಒಂದೇ ರಾತ್ರಿ ಸುಮಾರು 7ಕ್ಕೂ ಅಧಿಕ ಮನೆಗಳ ಬೀಗ ಮುರಿದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಘಟನೆಯ ವಿವರ: ನಾಗೇಂದ್ರಮಟ್ಟಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಮನೆ ಮಾಲೀಕರು ಊರಿಗೆ ಹೋದ ಸಮಯವನ್ನೇ ಕಾದು ಕುಳಿತಿದ್ದ ಖದೀಮರು, ಕಿಟಕಿ ಹಾಗೂ ಬಾಗಿಲುಗಳ ಬೀಗ ಮುರಿದು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಕಪಾಟುಗಳನ್ನು ಜಾಲಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಮತ್ತು ನಗದನ್ನು ದೋಚಿದ್ದಾರೆ.
ಕಳ್ಳರ ವಿಚಿತ್ರ ವರ್ತನೆ: ಕಳ್ಳತನ ಮಾಡಲು ಬಂದ ಖದೀಮರು ಮನೆಯಲ್ಲಿದ್ದ ವಸ್ತುಗಳನ್ನು ದೋಚಿದ್ದಲ್ಲದೆ, ನಿರಾಳವಾಗಿ ಅಡುಗೆ ಮನೆಗೆ ನುಗ್ಗಿ ಚಹಾ ಮಾಡಿಕೊಂಡು ಕುಡಿದಿದ್ದಾರೆ! ಚಳಿಯ ವಾತಾವರಣವಿದ್ದ ಕಾರಣ, ಕಳ್ಳತನದ ನಡುವೆಯೇ ಚಹಾ ಸೇವಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಕಳ್ಳರ ಈ ಧೈರ್ಯ ಮತ್ತು ವಿಚಿತ್ರ ವರ್ತನೆ ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ.
ಸರಣಿ ಕಳ್ಳತನದಿಂದ ಕಂಗಾಲಾಗಿರುವ ನಾಗೇಂದ್ರಮಟ್ಟಿ ನಿವಾಸಿಗಳು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಪೊಲೀಸ್ ಗಸ್ತು ಸರಿಯಾಗಿ ನಡೆಯುತ್ತಿಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


