ಕುಣಿಗಲ್: ಮನೆಯೊಂದರ ಕಾಂಪೌಂಡ್ ನಲ್ಲಿದ್ದ ಹಾವು ಹಾಗೂ ಮೊಟ್ಟೆಯನ್ನು ಉರಗತಜ್ಞ ಮಹಂತೇಶ್ ರಕ್ಷಿಸಿದ್ದಾರೆ.
ಕುಣಿಗಲ್ ನ ಮಹಂತೇಶ್ ಅವರಿಗೆ ಅಗ್ರಹಾರದ ಮುಜಾಹಿದ್ ಖಾನ್ ಎಂಬವರು ಕರೆ ಮಾಡಿ ಮನೆಯ ಕಾಂಪೌಂಡ್ ನಲ್ಲಿ ಹಾವು ಇದೆ ಎಂದು ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು, ಮನೆಯ ಕಾಂಪೌಂಡ್ ನಲ್ಲಿದ್ದ ನೀರು ಹಾವನ್ನು ರಕ್ಷಿಸಿದ್ದಾರೆ. ಇನ್ನೂ ಹಾವು ಮೊಟ್ಟೆಯಿಟ್ಟಿದ್ದು, ಮೊಟ್ಟೆ ಹಾಗೂ ಹಾವನ್ನು ಸುರಕ್ಷತೆ ಬಾಕ್ಸ್ ನಲ್ಲಿ ಹಾಕಿ ಇಟ್ಟಿದ್ದಾರೆ.
ಇದೇ ವೇಳೆ ಈ ಹಾವಿನ ಬಗ್ಗೆ ವಿವರಣೆ ನೀಡಿದ ಅವರು, ಹಾವು ಮೊಟ್ಟೆ ಹಾಕಿದ ನಂತರ ಸುರಕ್ಷಿತವಾಗಿ ಮೊಟ್ಟೆಗಳನ್ನು ಮರಳಿನಲ್ಲಿ ಇಟ್ಟು ಅದಕ್ಕೆ ಬೆಚ್ಚಗಿನ ಶಾಖ ಬರುವ ಹಾಗೆ ವ್ಯವಸ್ಥೆ ಮಾಡಿ ಅಲ್ಲೇ ಮರಿ ಮಾಡಿಸಬೇಕಾಗುತ್ತದೆ. ಮೊಟ್ಟೆ ಹೊಡೆದು ಮರಿಗಳು ಹೊರಬರುವುದಕ್ಕೆ 45 ದಿನ ಆಗಬಹುದು. ತದನಂತರ ಮರಿಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅವರು ತಿಳಿಸಿದರು.
ಇದುವರೆಗೂ 3 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಸ್ನೇಕ್ ಮಹಂತೇಶ್ ರಕ್ಷಿಸಿದ್ದಾರೆ.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy