ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಕಿವಿ ಮಾತನ್ನೂ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ‘ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವುದು ತುಂಬಾ ದು:ಖದ ವಿಷಯ. ಉತ್ತಮ ನಿರ್ದೇಶಕನನ್ನು ಕಳೆದುಕೊಂಡಿದ್ದು ಮನಸ್ಸಿಗೆ ನೋವು ಉಂಟುಮಾಡಿದೆ ಎಂದರು.
ಈ ಘಟನೆಯನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬಸ್ಥರಿಗೆ ಗುರುಪ್ರಸಾದ್ ಅವರನ್ನು ಕಳೆದುಕೊಂಡಿರುವ ದು:ಖ ಭರಿಸುವಂತಹ ಶಕ್ತಿ ಆ ಭಗವಂತ ಕರುಣಿಸಲಿ. ಜೊತೆಗೆ ಕನ್ನಡ ಚಿತ್ರರಂಗ ಬೇರೆ ಭಾಷೆಗಳ ಹೊಡೆತಕ್ಕೆ ಸಿಲುಕಿದೆ. ಯಾರೇ ಆಗಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಲಿ ಎಂಥಹ ಸಂದರ್ಭವೇ ಬರಲಿ ಧೈರ್ಯದಿಂದ ಎದುರಿಸಬೇಕು’ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


