ಚಿತ್ರದುರ್ಗ: ಮದುವೆ ಕರೆಯೋಲೆಯಲ್ಲಿ “ಆಶೀರ್ವಾದವೇ ಉಡುಗೊರೆ” ಎಂದು ಬರೆಯುವುದನ್ನು ನೀವು ನೋಡಿರ ಬಹುದು ಆದರೆ, ಇಲ್ಲೊಂದು ವಿವಾಹ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕುಮಾರಣ್ಣನಿಗೆ ಮತ ನೀಡುವುದೇ ನೀವು ಕೊಡುವ ಉಡುಗೊರೆ ಎಂದು ಪತ್ರಿಕೆಯಲ್ಲಿ ಬರೆಸಲಾಗಿದೆ.
ಹೌದು…! ಅಭಿಮಾನಕ್ಕೆ ಎಲ್ಲೆ ಇಲ್ಲ ಅಂತಾರೆ. ಹಲವು ಘಟನೆಗಳು ಸಾಕ್ಷಿಯೂ ಆಗಿದೆ. ಅಂತಹ ಒಂದು ವಿಶೇಷ ಅಭಿಮಾನ ಚಿತ್ರದುರ್ಗದ ಚೆಳ್ಳಕೆರೆಯ ಸ್ನಾತ್ತಕೋತ್ತರ ಪದವಿ ಪಡೆದ ಯುವಕನೊಬ್ಬ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ 2023 ರ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ ಎಂಬ ಸಂದೇಶ ಮುದ್ರಿಸಿ ಆಹ್ವಾನಿಸುತ್ತಿದ್ದಾರೆ. ಸದ್ಯ ಈ ವಿಶೇಷ ಮದುವೆಯ ಆಮಂತ್ರಣ ಪತ್ರಿಕೆ ಇದೀಗ ಸದ್ದು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಿ.ಗೌರೀಪುರ ಗ್ರಾಮದ ಪುಟ್ಟಮ್ಮ ನಾಗರಾಜಪ್ಪ ದಂಪತಿಗಳ ಪುತ್ರ ಜಯಕುಮಾರ್ ಇಂತಹದ್ದೊಂದು ವಿಶೇಷ ಮದುವೆ ಆಮಂತ್ರಣ ಹಂಚುತ್ತಿದ್ದಾರೆ.
ಮೇ 18 ರಂದು ಮದುವೆ ನಿಶ್ಚಯವಾಗಿದೆ. ಜಯಕುಮಾರ್ ಸ್ನಾತಕೋತ್ತರ ಪಧವಿಧರರಾಗಿದ್ದು ತುಮಕೂರಿನ ಜ್ಯೋತಿಲಕ್ಷ್ಮಿ ಎಂಬುವರನ್ನ ವಿವಾಹವಾಗುತ್ತಿದ್ದಾರೆ ಮದುಮಗಳು ಕೂಡ ಸ್ನಾತಕೋತ್ತರ ಪದವಿಧರೆಯಾಗಿದ್ದಾರೆ.
ಈ ಹಿಂದೆ ಸಿಎಂ ಆಗಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಜನಪರ ಆಡಳಿತವನ್ನು ಸ್ಮರಿಸಿಕೊಳ್ಳುತ್ತಾ, ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಹೊತ್ತಿದ್ದಾರೆ.ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾವಚಿತ್ರಗಳನ್ನ ಮುದ್ರಿಸಿ ಇವರ ಆಶೀರ್ವಾದದೊಂದಿಗೆ ಎಂದು ಉಲ್ಲೇಖಿಸಲಾಗಿದೆ.
ತಮ್ಮ ಸುಖಾಗಮನ ಬಯಸುವ ಬಂಧುಮಿತ್ರರ ಜೊತೆ ಕುಮಾರಣ್ಣನ ಅಭಿಮಾನಿಗಳು ಎಂದು ಮುದ್ರಿಸಲಾಗಿದೆ. ಸದ್ಯ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5