ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೇಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಜಗಳ ನಡೆದಿದೆ. ಈ ವೇಳೆ ಪ್ರಭಾಕರ ತನ್ನ ಮಕ್ಕಳ ಜೊತೆ ಸೇರಿಕೊಂಡು ತನ್ನ 64 ವರ್ಷದ ಅಕ್ಕಮ್ಮ ಎಂಬ ಅಕ್ಕನನ್ನ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಪ್ರಭಾಕರ, ಆತನ ಪುತ್ರ ದಿಲೀಪ ಹಾಗೂ ಪುತ್ರಿ ತ್ರಿವೇಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಎರಡು ಕುಟುಂಬಗಳ ನಡುವೆ ಕಳೆದ 15 ವರ್ಷಗಳಿಂದ ಜಮೀನಿನ ವಿಚಾರಕ್ಕಾಗಿ ಗಲಾಟೆ ನಡೆಯುತ್ತಿದ್ದು ಅಕ್ಕಮ್ಮ ಹಾಗೂ ಸಹೋದರ ಪ್ರಭಾಕರ ಅವರ ಜಮೀನು ವಿವಾದ ಸದ್ಯ ಈಗ ಕೋರ್ಟ್ನಲ್ಲಿದೆ.
ಅಕ್ಕಮ್ಮ ಕೋರ್ಟ್ನ ಅನುಮತಿ ಪಡೆದು ಜಮೀನು ಅಳತೆ ಮಾಡಲು ಸರ್ವೇಯರ್ ಜೊತೆ ಜಮೀನಿಗೆ ಬಂದಿದ್ದರು. ಸರ್ವೇಯರ್ ಜಮೀನು ಅಳತೆ ಮಾಡಲು ಬಂದಾಗ ನಮ್ಮ ಜಮೀನು ಅಳತೆ ಮಾಡಲು ನೀವು ಯಾರು ಅಂತಾ ದಿಲೀಪ್ ಅಕ್ಕಮ್ಮನ ಮೇಲೆ ಕೊಡಗೋಲಿನಿಂದ ದಾಳಿಗೆ ಯತ್ನಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಪ್ರಭಾಕರ ದೊಣ್ಣೆಯಿಂದ ಅಕ್ಕಮ್ಮನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಕುಸಿದುಬಿದ್ದ ಅಕ್ಕಮ್ಮ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಘಟನೆ ಬಳಿಕ ಆರೋಪಿ ಪ್ರಭಾಕರ್, ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


