ಮೈಸೂರು: ನಾನ್ಯಾವತ್ತೂ ಜಮೀರ್ ಅಹಮದ್ ಖಾನ್ ಅವರನ್ನು ಕುಳ್ಳ ಎಂದು ಕರೆದಿಲ್ಲ, ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಮೀರ್ ಅವರು ನನ್ನನ್ನು ಕರಿಯ ಎಂದು ಸಂಬೋಧಿಸಿಲ್ಲ. ನಮಿಬ್ಬರ ನಡುವೆ ರಾಜಕೀಯವಾಗಿ ಆತ್ಮೀಯತೆ ಇತ್ತೇ ಹೊರತು, ಈ ಹೇಳಿಕೆಗಲ್ಲ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಒಮ್ಮೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನನ್ನನ್ನು ಕುಮಾರ ಎಂದು ಕರೆದಾಗ ಹೊಡೆಯಲು ಹೋಗಿದ್ದರು. ಈ ರೀತಿಯ ಪದಬಳಕೆ ಎಂದಿಗೂ ನನ್ನಿಂದಲೂ ಆಗಿಲ್ಲ, ಅವರಿಂದಲೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ದುಡ್ಡಿನ ಮದದಿಂದ ಕೊಂಡುಕೊಳ್ಳುತ್ತೇನೆ ಎಂಬ ರೀತಿ ಮಾತನಾಡಿದ್ದಾರೆ. ಇವರು ಎಲ್ಲಿದ್ದರು, ಯಾವ ಸಂದರ್ಭದಲ್ಲಿ, ಯಾರ ಕಾಲು ಹಿಡಿದಿದ್ದಾರೆ ಎಂಬುದು ಗೊತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಜಮೀರ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ, ಗೃಹಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಮಾನ, ಮರ್ಯಾದೆ ಏನಾದರೂ ಇದೆಯೇ?, ನಾಗರಿಕ ಸಮಾಜವೆಂದು ಕರೆಯಬೇಕೇ? ಎಂದು ಟೀಕಾಪ್ರಹಾರ ನಡೆಸಿದ ಅವರು, ವರ್ಣಭೇದದ ಕುರಿತಂತೆ ಚರ್ಚೆ ಮಾಡುವುದು ಬೇಡ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296