ತುಮಕೂರು : ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಆರೋಗ್ಯದ ಸಮಸ್ಯೆ ಇದ್ದಾಗ ಮುಜುಗರಕ್ಕೆ ಒಳಗಾಗದೆ ತಪಾಸಣೆ ಮಾಡಿಸುವುದರಿಂದ ಆಗಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ವೈದ್ಯರಾದ ಡಾ.ವೈ.ಎಂ.ಚಂದ್ರಶೇಖರಮೂರ್ತಿ ತಿಳಿಸಿದರು.
ಗ್ರಾಮದ ಲಕ್ಷ್ಮಿನಾರಾಯಣ ಆಸ್ಪತ್ರೆ, ವೈ.ಎನ್.ಹೊಸಕೋಟೆ, ಡಾ.ಶಿವಕುಮಾರ್ ಆಸ್ಪತ್ರೆ, ಪಾವಗಡ, ಡಾ.ಚಂದ್ರಶೇಖರ್ ಆಸ್ಪತ್ರೆ ಬೆಂಗಳೂರು ಮತ್ತು ಸ್ಪೆಕ್ಟ್ರಮ್ ಡಯೋಗ್ನಸ್ಟಿಕ್ಸ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೃದಯರೋಗ ಸ್ಕ್ರೀನಿಂಗ್, ಗರ್ಭಕೋಶ ಕ್ಯಾನ್ಸರ್ ತಪಾಸಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಮನುಷ್ಯನಿಗೆ ಅನಾರೋಗ್ಯ ಕಾಡುವುದು ಸಹಜ. ಕೆಲವು ಬಹಿರಂಗವಾಗಿ ತಿಳಿಯುತ್ತವೆ. ಹಲವು ಗೌಪ್ಯವಾಗಿದ್ದು ಮುಂದೊಮ್ಮೆ ತೊಂದರೆಗೆ ಗುರಿ ಮಾಡುತ್ತವೆ. ಆದಾಗಿ ಯಾರೊಬ್ಬರೂ ಅನಾರೋಗ್ಯದ ಬಗ್ಗೆ ತಾತ್ಸಾರ ಹೊಂದದೆ ಅವಶ್ಯಕತೆ ಇದ್ದಲ್ಲಿ ತಪಾಸಣೆ ಮಾಡಿಸಿಕೊಂಡು ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಒಟ್ಟು 350 ರೋಗಿಗಳ ತಪಾಸಣೆ ಮಾಡಲಾಯಿತು. 100 ಕ್ಕೂ ಹೆಚ್ಚು ಜನರಿಗೆ ಇಸಿಜಿ ಮಾಡಲಾಯಿತು ಮತ್ತು 80 ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಲಾಯಿತು.
ವೈದ್ಯರುಗಳಾದ ಡಾ.ಎಂ.ಪ್ರೇಮಯೋಗಿ, ಡಾ.ವಿ.ಕೆ.ಶಿವಕುಮಾರ್, ಡಾ.ವೈ.ಎಂ.ಚಂದ್ರಶೇಖರಮೂರ್ತಿ ರವರ ತಂಡ ರೋಗಿಗಳ ತಪಾಸಣೆ ನಡೆಸಿದರು. ವೈದ್ಯಕೀಯ ಸಿಬ್ಬಂದಿಯಾದ ದಿವ್ಯ, ಅರ್ಪಣ, ಮೇನಕ, ಸುಮಾ, ಹರೀಶ್, ಅನಿಲ್ ಇತರರು ಪಾಲ್ಗೊಂಡಿದ್ದರು.
ವರದಿ: ನಂದೀಶ್ ನಾಯ್ಕ ಪಿ. ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC