ಹಸಿ ಕೊಬ್ಬರಿ, ಪಾಲಕ್ ತಿಂದರೆ ಏನಾಗುತ್ತೆ ಗೊತ್ತಾ?
ಅನೇಕ ಜನರು ಹಸಿ ಕೊಬ್ಬರಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅಲ್ಲದೆ, ಇದನ್ನು ನಿಯಮಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಈಗ ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳನ್ನು ತಿಳಿಯೋಣ. ನಿತ್ಯವೂ ಪಾಲಕ್ ಸೊಪ್ಪನ್ನು ತಿಂದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮಲಬದ್ಧತೆ ಸಮಸ್ಯೆಯೂ ಕಡಿಮೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಥೈರಾಯ್ಡ್ ಅನ್ನು ಕಡಿಮೆ ಮಾಡುತ್ತದೆ.
ನಿತ್ಯ 5 ಖರ್ಜೂರ ತಿಂದರೆ ದೇಹಕ್ಕೆ ಹಲವಾರು ಪ್ರಯೋಜ..!
ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸುಲಭವಾಗಿ ತಿನ್ನಬಹುದು. ಇದರಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಕೆ ಮತ್ತು ಸೋಡಿಯಂ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ. ಮೂಳೆಗಳೂ ಬಲಗೊಳ್ಳುತ್ತವೆ. ಖರ್ಜೂರದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಅಡುಗೆಯಲ್ಲಿ ಪಾಮ್ ಆಯಿಲ್ ಬಳಸುತ್ತೀರಾ ? ಹಾಗಿದ್ದರೆ ಎಚ್ಚರ…
ಪಾಮ್ ಆಯಿಲ್ ನಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಅಧಿಕವಾಗಿದೆ. ಇವು ನಮ್ಮಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ಹೃದಯ ಕಾಯಿಲೆ ಮತ್ತು ರಕ್ತದೊತ್ತಡದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನಾವು 100 ಗ್ರಾಂ ತಾಳೆ ಎಣ್ಣೆಯನ್ನು ಸೇವಿಸಿದರೆ, ನಮ್ಮ ದೇಹ 884 ಕ್ಯಾಲೊರಿಗಳನ್ನು ಪಡೆಯುತ್ತದೆ. ಇದು ತೂಕ ಹೆಚ್ಚಾಗುವುದು, ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಮಧುಮೇಹದ ಅಪಾಯಕ್ಕೆ ಇದು ಕಾರಣವಾಗುತ್ತದೆ.
ಕೆಂಪು ಬಾಳೆಹಣ್ಣು ಸೇವಿಸಿ, ಹಲವು ಪ್ರಯೋಜನೆಗಳನ್ನು ಪಡೆಯಿರಿ..
ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ತೂಕ ಇಳಿಸುವವರು ಅನ್ನದ ಬದಲು ಒಂದು ಕೆಂಪು ಬಾಳೆಹಣ್ಣನ್ನು ತಿನ್ನಬಹುದು. ರೋಗ ನಿರೋಧಕ ಶಕ್ತಿ ವೃದ್ಧಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಂಪು ಬಾಳೆಹಣ್ಣು ಸೇವಿಸುವುದು ಅನಿವಾರ್ಯ.ಈ ವಿಧಾನಕ್ಕೆ ಕೆಂಪು ಬಾಳೆಹಣ್ಣು ಸೇವಿಸುವುದನ್ನು ಸೇರಿಸಿ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಹೇರಳವಾಗಿದೆ.


