ಭಾರೀ ಸುಂಟರಗಾಳಿಯಿಂದಾಗಿ ಐವರು ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಚೀನಾದ ಗುವಾಂಗ್’ಝನಲ್ಲಿ ನಡೆದಿದೆ.
ಚೀನಾದ ಸರ್ಕಾರಿ ಮಾಧ್ಯಮ ಪ್ರಕಾರ, 19 ಮಿಲಿಯನ್ ಜನರಿರುವ ಗುವಾಂಗ್ ಝ ನಗರದಲ್ಲಿ, ಮೂರರ ತೀವ್ರತೆಯಲ್ಲಿ ಸುಂಟರಗಾಳಿ ಅಪ್ಪಳಿಸಿದೆ. 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ. ಆದರೆ ಯಾವುದೇ ವಸತಿ ಮನೆಗಳು ಕುಸಿದಿಲ್ಲ ಎಂದು ತಿಳಿಸಿದೆ.
ಸುಂಟರಗಾಳಿಯ ನಂತರ ದಕ್ಷಿಣ ಚೀನಾದಲ್ಲಿ ಭಾರೀ ಮಳೆ ಸುರಿದಿದ್ದು, ಮಾರಣಾಂತಿಕ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಲಕ್ಷಾಂತರ ಜನರನ್ನು ರಕ್ಷಣೆ ಮಾಡಲಾಗಿದೆ.
127 ಮಿಲಿಯನ್ ಜನರಿಗೆ ಆರ್ಥಿಕ ಶಕ್ತಿ ನೆಲೆಯಾಗಿರುವ ಗುವಾಂಗ್ ಡಾಂಗ್ ಪ್ರಾಂತ್ಯವು ವ್ಯಾಪಕ ಪ್ರವಾಹವನ್ನು ಕಂಡಿದೆ. ಈ ಪ್ರದೇಶದಲ್ಲಿ 110,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ವಾರದ ಆರಂಭದಲ್ಲಿ ಗುವಾಂಗ್ ಡಾಂಗ್ ನಲ್ಲಿ ಪ್ರವಾಹದಿಂದಾಗಿ ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ಇನ್ನೂ, ಚೀನಾದ ಹವಾಮಾನ ಸಂಸ್ಥೆಯು ತಿಂಗಳ ಅಂತ್ಯದವರೆಗೆ ಭಾರೀ ಮಳೆ ಮತ್ತು ಬಲವಾದ ಬಿರುಗಾಳಿ ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಿದೆ ಅಂತ ಸಿಎನ್ಎನ್ ವರದಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296