ಸರಗೂರು: ಶನಿವಾರ ಮತ್ತು ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ 3 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ತಾಲೂಕಿನ ಹೂವಿನಕೊಳ ಗ್ರಾಮದಲ್ಲಿ ನಡೆದಿದೆ.
ನಂಜು ಮಣಿ ಎಂಬುವರಿಗೆ ಸೇರಿದ 3 ಎಕರೆಯಲ್ಲಿ ಜಮೀನಲ್ಲಿ ಬಾಳೆ ತೋಟದಲ್ಲಿನ 4,000 ಗಿಡಗಳ ಪೈಕಿ 2,000 ಗಿಡಗಳು ನೆಲಸವಾಗಿದೆ. ಇದರಿಂದ ಕೈಬಂದ ಅಂತಹ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿಯಾಗಿದೆ ಎಂದು ನಂಜುಮಣಿ ಅಳಲು ತೋಡಿಕೊಂಡರು.
ಕೆಲವೊಂದಿಷ್ಟು ನಿಂತಿರುವ ಬಾಳೆ ಗಿಡಗಳು ರಸಭಸದ ಗಾಳಿಗೆ ಸಂಪೂರ್ಣವಾಗಿ ಬೆಂಡಾಗಿವೆ. 4,000 ಸಾವಿರ ಗಿಡ ನೆಟ್ಟು10 ತಿಂಗಳಿಂದ ಪಾಲನೆ ಪೋಷಣೆ ಮಾಡಿ ಉತ್ತಮ ರಿತಿ ಬೆಳೆಸಿದ್ದರು. ಈಗಾಗಲೇ ಬಾಳೆಗಿಡ ಗೊನೆ ಬಿಡುವುದಕ್ಕೆ ಪ್ರಾರಂಭಿಸಿದ್ದವು. ಸಸಿ ಗೊಬ್ಬರ ಕೂಲಿ ನಿರ್ವಹಣೆ ಸೇರಿ ಪ್ರತಿ ಎಕರೆಗೆ 1ಲಕ್ಷ ರೂ.ನಂತೆ ಸುಮಾರು 4 ಲಕ್ಷ ರೂ. ವರೆಗೂ ಖರ್ಚು ಮಾಡಿದ್ದರು. ಉತ್ತಮ ಲಾಭದ ನಿರೀಕ್ಷೆ ಹೊಂದಿದ್ದರು. ಅದರೆ ಈಗ ಬಿರುಸಾದ ಗಾಳಿ ಮಳೆಗೆ ಆರ್ಭಟಕ್ಕೆ ಕಂಗಾಲಾಗಿದ್ದಾರೆ. ಅದಕ್ಕಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಭೀಮಾ ಸೇನೆ ತಾಲೂಕು ಅಧ್ಯಕ್ಷ ಮಹೇಂದ್ರ ಹೂವಿನಕೊಳ ಈ ಸಂಬಂಧ ಮಾತನಾಡಿ, ಮೂರು ಎಕರೆಯಲ್ಲಿ ಬಾಳೆ ಗೋನೆ ಬಿಡುವುದಕ್ಕೆ ಪ್ರಾರಂಭಿಸಿತ್ತು. ಎರಡು ಮೂರು ದಿನಗಳಿಂದ ನಿರಂತರವಾಗಿ ಬಿರುಗಾಳಿ ಸಮೇತ ಸುರಿದ ಮಳೆಗೆ ಬಾಳೆ ಗಿಡಗಳು ನೆಲಕಚ್ಚಿದೆ. ಇನ್ನೂ ಮೂರು ತಿಂಗಳಲ್ಲಿ ಫಸಲು ಕೈ ಸೇರುತ್ತಿತ್ತು. ಆದರೆ ಮಳೆಯಿಂದಾಗಿ 50 ರಿಂದ ಒಂದು ಲಕ್ಷ ವರೆಗೆ ಆದಾಯ ನಷ್ಟ ಉಂಟಾಗಿದೆ. ಇದರಿಂದ ಕೃಷಿ ಹಾಗೂ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC