ಪಾವಗಡ: ಸರ್ಕಾರಿ ಶಾಲೆಗಳು ಅಂದವಾಗಿರಬೇಕು ಎನ್ನುವ ಕಾರಣಕ್ಕಾಗಿ ಹೆಲ್ಪ್ ಸೊಸೈಟಿ ಮಹತ್ವದ ಹೆಜ್ಜೆಯಿಟ್ಟಿದ್ದು, ಶಾಲೆಗೆ ಬಣ್ಣಗಳನ್ನು ವಿತರಿಸುವ ಮೂಲಕ, ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿನೂತನ ಪ್ರಯತ್ನ ನಡೆಸಿದೆ
ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ನೇತೃತ್ವದಲ್ಲಿ ಬಣ್ಣದ ಡಬ್ಬಗಳನ್ನು ವಿತರಿಸಲಾಯಿತು. ಪಾವಗಡ ತಾಲ್ಲೂಕು ವೀರಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತುಂಬಾ ಹಳೆಯದ್ದಾಗಿದ್ದು, ಇದನ್ನು ಸುಣ್ಣ ಬಣ್ಣಗಳಿಂದ ಆಕರ್ಷಣೆ ಗೊಳಿಸಿ ಶಾಲಾ ಮಕ್ಕಳಿಗೆ ಉತ್ತಮ ವಾತಾವರಣ ದೊರಕುವಂತೆ ಮಾಡಲು ಹೆಲ್ಪ್ ಸೊಸೈಟಿ ಈ ಕಾರ್ಯವನ್ನು ಮಾಡಿತು.
ಶಾಲೆಗೆ ಬಣ್ಣದ ಡಬ್ಬಿಗಳನ್ನು ತಂದೊಡನೆ ಶಾಲೆಯ ಮಕ್ಕಳು ಕೂಡ ಖುಷಿಪಟ್ಟಿದ್ದು, ಚಪ್ಪಾಳೆ ತಟ್ಟುವ ಮೂಲಕ ಹೆಲ್ಪ್ ಸೊಸೈಟಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಸಕಿ ರತ್ನಮ್ನ ಹಾಗೂ ಆಡಳಿತ ಮಂಡಳಿ, ಹೆಲ್ಪ್ ಸೊಸೈಟಿ ಪದಾಧಿಕಾರಿಗಲಾದ ಶರತ್, ಮಣಿ, ಪ್ರಸನ್ನ, ಸುಬ್ರಮಣ್ಯ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB