ತುಮಕೂರು: ವಯನಾಡಿನ ದುರಂತ ಕಂಡು ಆ್ಯಂಬುಲೆನ್ಸ್ ಚಾಲಕರು ಕರಗಿದ್ದು, ಅಗತ್ಯ ಸಾಮಗ್ರಿಗಳೊಂದಿಗೆ ಆ್ಯಂಬುಲೆನ್ಸ್ ಚಾಲಕರು ತೆರಳಿದ್ದಾರೆ.
ತುಮಕೂರಿನ ಆ್ಯಂಬುಲೆನ್ಸ್ ಚಾಲಕರು ಮತ್ತು ಮಾಲಿಕರ ಸಂಘದಿಂದ ವಯನಾಡ್ ಸಂತ್ರಸ್ತರಿಗೆ ಸಹಾಯ ಹಸ್ತಚಾಚಲಾಯಿತು. ಎರಡು ಆ್ಯಂಬುಲೆನ್ಸ್ ಗಳಲ್ಲಿ ವಯನಾಡ್ ಗೆ 10 ಮಂದಿ ಚಾಲಕರು ತೆರಳಿದರು.
ಮಕ್ಕಳು, ಮಹಿಳೆಯರು ಸೇರಿದಂತೆ ಪ್ರವಾಹ ಸಂತ್ರಸ್ಥರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಹೊತ್ತು, ತುಮಕೂರಿನ ಆ್ಯಂಬುಲೆನ್ಸ್ ಚಾಲಕರು ವಯನಾಡ್ ಗೆ ತೆರಳಿದರು.
ದಾನಿಗಳಿಂದ ಹಾಗೂ ತಮ್ಮ ಕೈಲಾದ ಹಣ ಹೊಂದಿಸಿ ಸಹಾಯ ನೀಡಿದ್ದು, ಪ್ರವಾಹ ಸಂತ್ರಸ್ತರಿಗೆ ಬೇಕಾದ ಬಟ್ಟೆ, ಆಹಾರ, ನೀರು ಸೇರಿದಂತೆ ಔಷಧಿಗಳನ್ನು ತೆಗೆದುಕೊಂಡು ಪ್ರಯಾಣ ಬೆಳೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296