ತುಮಕೂರು: ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ, ಹೆಣ ಬೀಳುತ್ತದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದು, ಪ್ರತಿಭಟನೆ ಅವಕಾಶ ಕೊಟ್ಟು ಹೆಣ ಬಿದ್ದು ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಕೊಡಗಿಗೆ ಕಾಂಗ್ರೆಸ್ ಚಲೋ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಆತನ ಯಾವುದೊ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದಾನೆ. ಇದು ಜಗತ್ಜಾಹೀರಾಗಿದೆ. ಆತನ ಸಂದೇಶಗಳನ್ನು ನೋಡಿದ್ದೇನೆ. ಆತ ನಾನು ಜೆಡಿಎಸ್ ನಲ್ಲಿದ್ದೆ ಆನಂತ ಕಾಂಗ್ರೆಸ್ ಗೆ ಬಂದೆ ಎಂದಿದ್ದಾನೆ. ಈಗ ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಜಗ್ಗೇಶ್ ಹೇಳಿದರು.
ಕಾಂಗ್ರೆಸ್ ಹೋರಾಟ ನೆಕ್ಸ್ಟ್ ಜೂನ್ ವರೆಗೂ ಇರಬಹುದು. ಆಮೇಲೆ ಎಲ್ಲಾ ತಣ್ಣಾಗಿ ಬಿಡುತ್ತೆ. ರಾಜ್ಯದ ಜನತೆಗೆ ಗೊತ್ತಿದೆ ಯಾಕೆ ಈಗ ಪ್ರತಿಭಟನೆ ಆಗ್ತಿದೆ ಅಂತ . ಪ್ರತಿಯೊಬ್ಬರಿಗೂ ಆ ಜಾಗ ಹಿಡಿಬೇಕು ಎಂಬ ಹುಮ್ಮಸಿದೆ. ಬಟ್ ವಿಷಯಗಳಿಲ್ಲ, ವಿಷಯ ಇದ್ದಿದ್ದೆ ಆದ್ರೆ ಅದ್ಭುತ ಡಿಬೇಟ್ ನಡೆಯುತ್ತಿತ್ತು. ಡಿಬೇಟ್ ನಡೆಯದೆ ಬರೀ ಮೊಟ್ಟೆ ವಿಚಾರವೇ ಚರ್ಚೆ ನಡೆಯುತ್ತಿದೆ ಅಂದರೆ ಇಶ್ಯೂ ಇಲ್ಲ ಅಂತ ಎಂದರು.
ಕೊಡಗಿನಲ್ಲಿ ಪ್ರತಿಭಟನೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ. ಪ್ರತಿಭಟನೆ ಅವಕಾಶ ಕೊಟ್ಟು ಹೆಣ ಬಿದ್ದು ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು. ಹೌದು 100 ಪರ್ಸೆಂಟ್ ಹೆಣ ಬೀಳುತ್ತದೆ. ಎಷ್ಟು ಕೊಲೆ ನಡೆದಿದೆಯೇ ಗೊತ್ತೆ ನಿಮಗೆ. ಎಲ್ಲೆಲ್ಲಿಂದ ಬಂದು ಕೊಲೆ ಮಾಡಿದ್ದಾರೆ ಗೊತ್ತಾ ನಿಮಗೆ? ಕೇರಳ ಗಡಿ ದಾಟಿ ಬಂದು ಕೊಲೆ ಮಾಡ್ತಾರೆ. ಅದಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ಅವೈಡ್ ಮಾಡಬೇಕು ಎಂದರು.
ಎಸಿಬಿ- ಲೋಕಾಯುಕ್ತ ವಿಚಾರದಲ್ಲಿ ಹೈ ಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಎಲ್ಲಾ ತಿಳಿದುಕೊಂಡು ಮಾತನಾಡ್ತೇನೆ ಎಂದಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz