ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕರಡಾಳು ಸಂತೆ ಮೈದಾನದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಿಪಟೂರು ವಕೀಲರ ಗೆಳೆಯರ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂಗಳು ಮತ್ತು ಸಾಕ್ಸ್,ಟೈ- ಬೆಲ್ಟ್ ಹಾಗೂ ಗುರುತಿನ ಪತ್ರಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ನೂರುನ್ನೀಸ, ಪ್ರತಿ ಶಾಲೆಯಲ್ಲೂ ಟಿ.ಕೆ. ಪಟ್ಟಾಭಿರಾಮು ಮತ್ತು ಛಾಯರವರಂತಹ ಶಿಕ್ಷಕರು ಇದ್ದರೆ, ಗುಣಾತ್ಮಕ ಶಿಕ್ಷಣ ಹಾಗೂ ಎಲ್ಲ ಮಕ್ಕಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯ ಎಂದು ಪ್ರಶಂಶಿಸಿ, ಅಭಿನಂದಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ ಎಂದು ಇದೇ ವೇಳೆ ಕರೆ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಚಂದನ ಜೆ. ಮಾತನಾಡಿ, ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಶಾಲೆ ಬಿಡಿಸದೆ. ಉತ್ತಮ ಶಿಕ್ಷಣ ನೀಡಿದರೆ, ಪ್ರತಿ ಗ್ರಾಮವು ನಂದನವನ ವಾಗುತ್ತದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ. ಆರ್. ದಯಾನಂದ್, ಕಾರ್ಯದರ್ಶಿ ಅಜಯ್, ಉಪಾಧ್ಯಕ್ಷ ಸುರಭಿ ದೇನು, ವಕೀಲರಾದ ರಾಮಚಂದ್ರಯ್ಯ, ನಂದೀಶ್ ಕುಮಾರ್, ರಾಜೇಂದ್ರ ಪ್ರಸಾದ್, ಬಾಲಕೃಷ್ಣ , ಎಸ್ಡಿಎಂಸಿ ಅಧ್ಯಕ್ಷ ಕೆ.ಎಲ್.ಗೋಪಿ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುಳಾ, ದರ್ಶನ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಆರ್.ಜಯರಾಂ, ಪ್ರಧಾನ ಕಾರ್ಯದರ್ಶಿ ಟಿ.ಕೆ. ಪಟ್ಟಾಭಿರಾಮು, ಗೌರವಾಧ್ಯಕ್ಷ ಓಂಕಾರಮೂರ್ತಿ, ಸಹಕಾರ್ಯದರ್ಶಿ ಸಿ.ಎಸ್. ನಾಗರಾಜು, ಸಿಆರ್ಪಿ ಎ.ಬಿ. ರಾಜಶೇಖರ್, ಶಿಕ್ಷಕರಾದ ಓಂಕಾರಮೂರ್ತಿ ಮತ್ತು ನಾಗರಾಜ್ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy