ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಚುನಾವಣೆ ಎಂದ ಮೇಲೆ ಯಾರಾದರೂ ಸೋಲಬೇಕು, ಯಾರಾದರೂ ಗೆಲ್ಲಬೇಕು. ಹಿಂದೆ ಇಲ್ಲಿ ಕಾಂಗ್ರೆಸ್ ಹಿಂದಿಗಿಂತಲೂ ಹೆಚ್ಚು ಮತ ಬಂದಿವೆ. 5 ಲಕ್ಷಕ್ಕೂ ಹೆಚ್ಚು ಮತಗಳು ನನಗೆ ಸಿಕ್ಕಿವೆ. ಹಿಂದೆ ನನ್ನ ತಂದೆಯೂ ಸೋತಿದ್ದರು. ನಾನೂ ಗೆಲ್ಲುತ್ತೇನೆ ಅಂದುಕೊಂಡಿದ್ದೆ. ಈ ಬಾರೀ ಸಾಧ್ಯವಾಗಿಲ್ಲ ಎಂದರು.
ಚುನಾವಣೆ ಬಳಿಕ ಮಾತ್ರವಲ್ಲ, ಯಾವಾಗಲೂ ಶಿವಮೊಗ್ಗ ಜನತೆಗೆ ಇರುತ್ತೇನೆ. ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ, ಇಲ್ಲೇ ಇರುತ್ತೇನೆ. ಶಕ್ತಿಧಾಮ ಮಾದರಿ ಇಲ್ಲೊಂದು ಶುರು ಮಾಡುತ್ತೇವೆ, ಮನೆ ಕೂಡ ಮಾಡುತ್ತೇವೆ. ನಮಗೆ ಸರ್ಕಾರದ ಬೆಂಬಲವೂ ಇದೆ. ಟಾಟಾ ಬಾಯ್ ಬಾಯ್ ಹೇಳೋದೆಲ್ಲಾ ಸುಳ್ಳು, ನಿಮ್ಮೊಂದಿಗೆ ಇರಲಿದ್ದೇನೆ. ಇನ್ನೂ ಸಾಕಷ್ಟು ವಿಚಾರಗಳಿವೆ. ಆದರೆ ಅದನ್ನು ಇನ್ನೊಮ್ಮೆ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಹಿಂದಿನ ಚುನಾವಣೆಗಳಿಗಿಂತ ಈ ಬಾರಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಮತಗಳು ಬಂದಿವೆ. ಕೊನೆಯವರೆಗೂ ಕ್ಷೇತ್ರದ ಕಾರ್ಯಕರ್ತರು, ಸಹೋದರ ಮಧು, ಎಲ್ಲರೂ ನನ್ನ ಜೊತೆ ಪ್ರಚಾರ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA