ಭಾರತದಲ್ಲಿರುವಷ್ಟು ವಿಶೇಷ, ವಿಚಿತ್ರ ಸಂಪ್ರದಾಯ ಆಚರಣೆಗಳು ಬೇರೆ ಎಲ್ಲಿಯೂ ನೀವು ನೋಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ನಮ್ಮ ಊಹೆಗೂ ಮೀರಿರುವ ಅಚ್ಚರಿಗಳು, ಕುತೂಹಲಗಳಿಗೂ ಈ ದೇವಾಲಯಗಳೂ ಕಾರಣವಾಗುತ್ತದೆ. ತಮಿಳುನಾಡಿನಲ್ಲಿ ದೇವಾಲಯಗಳ ಸಂಖ್ಯೆಗೆ ಕಡಿಮೆ ಇಲ್ಲ. ಅತೀ ಹೆಚ್ಚು ದೇವಾಲಯಗಳಿರುವುದು ತಮಿಳುನಾಡಿನಲ್ಲಿಯೇ.
ಏಲಿಯನ್‌ಗಳ ಕುರಿತು ಭಾರತದ ಇತಿಹಾಸದಲ್ಲಿಯೂ ಉಲ್ಲೇಖಗಳಿರುವುದನ್ನು ನೋಡಬಹುದು. ಅದರೆ ತಮಿಳುನಾಡಿನಲ್ಲಿ ಏಲಿಯನ್‌ಗೆ ದೇವಾಲಯವೇ ಇದೆ. ಹಾಗಾದ್ರೆ ಈ ದೇವಾಲಯ ಎಲ್ಲಿದೆ? ಯಾವ ಕಾರಣಕ್ಕೆ ನಿರ್ಮಿಸಲಾಗಿದೆ?
ತಮಿಳುನಾಡಿನ ಸೇಲಂನಲ್ಲಿ ಲೋಕನಾಥನ್ ಎಂಬಾತ ಈ ಏಲಿಯನ್ ದೇವಾಲಯ ನಿರ್ಮಿಸಿದ್ದಾರೆ. ಮಲ್ಲಮೂಪ್ಪಂಪಟ್ಟಿಯ ರಾಮಗೌಂಡನೂರಿನ ನಿವಾಸಿ ಲೋಕನಾಥನ್ ಎಂಬ ವ್ಯಕ್ತಿ ಇದನ್ನು ನಿರ್ಮಿಸಿದ್ದಾನೆ ಎಂದು ತಿಳಿದುಬಂದಿದೆ. ಅವರು ಶ್ರೀ ಶಿವ ಕೈಲಾಸ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು, ಅದಕ್ಕಾಗಿ ಅವರು ಎರಡು ವರ್ಷಗಳ ಹಿಂದೆ ನಿರ್ಮಾಣವನ್ನು ಪ್ರಾರಂಭಿಸಿದರು.
ಆದರೆ ಲಿಂಗ ಕೆತ್ತೆನೆ ಕಾರ್ಯ ಇನ್ನೂ ಪ್ರಕ್ರಿಯೆಯಲ್ಲಿದೆ, ಅದನ್ನು ನೆಲ ಅಂತಸ್ತಿನಲ್ಲಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಏಲಿಯನ್ ಮುಖ ಹೋಲುವ ಪ್ರತಿಮೆಯನ್ನೂ ಸಹ ಸ್ಥಾಪಿಸಲಾಗಿದೆ. ನೆಲಮಾಳಿಗೆಯಲ್ಲಿ ಬೇರೆ ಬೇರೆ ದೇವರುಗಳಿವೆ. ಶಿವ, ಪಾರ್ವತಿ, ಮುರುಗನ್, ಕಾಳಿಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ.
ತಾಳೆ ಗರಿಯ ಹಸ್ತಪ್ರತಿಗಳ ಮೇಲೆ ಸಿದ್ಧರು ಅನ್ಯಗ್ರಹ ಜೀವಿಗಳ ಬಗ್ಗೆ ಬರೆದಿದ್ದಾರೆ ಮತ್ತು ಭವಿಷ್ಯದಲ್ಲಿ ಎಲ್ಲರೂ ಅನ್ಯಲೋಕದವರನ್ನು ಪೂಜಿಸುತ್ತಾರೆ ಎಂದು ಲೋಕನಾಥನ್ ಹೇಳಿದ್ದಾರೆ. ಜೊತೆಗೆ ಈ ದೇವಾಲಯ ಕಟ್ಟಲು ಅವರು ಯಾವುದೇ ದೇಣಿಗೆ ಪಡೆಯುತ್ತಿಲ್ಲ ಬದಲಾಗಿದೆ ಈ ಸಿದ್ಧರ ಭಾಗ್ಯ ಅವರ ಶಿಷ್ಯರ ಸಹಾಯ ಪಡೆದಿದ್ದಾರೆ. ಈ ದೇವಸ್ಥಾನವನ್ನು ಕಟ್ಟಲು ಅನ್ಯಗ್ರಹ ಜೀವಿಗಳ ಅನುಮತಿಯನ್ನೂ ಪಡೆದಿದ್ದೇನೆ ಎನ್ನುತ್ತಾರೆ ಲೋಗನಾಥನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296