ನಾಳೆ ಗುರುವಾರ (ಆ. 15) ಸ್ವಾತಂತ್ರ್ಯ ದಿನಾಚರಣೆ ಇದೆ. ಭಾರತದ ಷೇರು ಮಾರುಕಟ್ಟೆಗೆ ಅಂದು ರಜೆ ಇದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎರಡೂ ಕೂಡ ಬಂದ್ ಆಗಿರಲಿವೆ. ಷೇರು ಮಾರುಕಟ್ಟೆಯ ಕೆಲವೇ ರಜಾ ದಿನಗಳಲ್ಲಿ ಆಗಸ್ಟ್ 15ರದ್ದೂ ಒಂದು. 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 14 ಸಾರ್ವತ್ರಿಕ ರಜಾ ದಿನಗಳು ಷೇರುಪೇಟೆಗೆ ಇವೆ. ಈ ಆಗಸ್ಟ್ ತಿಂಗಳಲ್ಲಿ ಇದೊಂದೇ ರಜೆ ಇರುವುದು. ಸೆಪ್ಟಂಬರ್ನಲ್ಲಿ ಯಾವ ರಜೆಯೂ ಇಲ್ಲ. ನಂತರ ರಜೆ ಸಿಗುವುದು ಅಕ್ಟೋಬರ್ ತಿಂಗಳಲ್ಲಿ, ನವೆಂಬರ್ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ.
ಷೇರು ಮಾರುಕಟೆಯಲ್ಲಿ ಡಿಸೆಂಬರ್ 31ರವರೆಗೂ ಇರುವ ರಜಾ ದಿನಗಳು
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಅಕ್ಟೋಬರ್ 2: ಗಾಂಧಿ ಜಯಂತಿ
ನವೆಂಬರ್ 1: ದೀಪಾವಳಿ
ನವೆಂಬರ್ 15: ಗುರುನಾನಕ್ ಜಯಂತಿ
ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ
ಈ ಮೇಲಿನವು ಸಾರ್ವತ್ರಿಕ ರಜಾ ದಿನಗಳು. ಇವುಗಳ ಜೊತೆಗೆ ಪ್ರತೀ ವಾರ ಶನಿವಾರ ಮತ್ತು ಭಾನುವಾರ ದಿನಗಳಂದು ಷೇರು ಮಾರುಕಟ್ಟೆಯಲ್ಲಿ ವ್ಯವಹಾರಗಳು ನಡೆಯುವುದಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296